Sunday, May 19, 2024
Homeಇತರಕೊರೊನಾ ಸೋಂಕಿನಿಂದ ಮೆದುಳಿಗೆ ಹಾನಿ ಸಾಧ್ಯತೆ- ವಿಜ್ಞಾನಿಗಳಿಂದ ಎಚ್ಚರಿಕೆ

ಕೊರೊನಾ ಸೋಂಕಿನಿಂದ ಮೆದುಳಿಗೆ ಹಾನಿ ಸಾಧ್ಯತೆ- ವಿಜ್ಞಾನಿಗಳಿಂದ ಎಚ್ಚರಿಕೆ

spot_img
- Advertisement -
- Advertisement -

ಲಂಡನ್ :  ಮೊನ್ನೆಯಷ್ಟೇ ಬೇರೆ ಬೇರೆ ದೇಶಗಳ 279 ವಿಜ್ಞಾನಿಗಳು ಗಾಳಿಯಲ್ಲೂ ಕೊರೊನಾ ಸೋಂಕು ಹರಡುತ್ತದೆ ಎಂಬ ಬಗ್ಗೆ  ವಿಶ್ವಸಂಸ್ಥೆಗೆ ವರದಿಯನ್ನು ನೀಡಿದ್ದರು. ಇದೀಗ ಇದರ ಬೆನ್ನಲ್ಲೇ ಕೊರೊನಾ ಸೋಂಕು ರೋಗಿಯ ಮೆದುಳಿನ ಮೇಲೆ ದುಷ್ಪರಿಣಾಮ ಉಂಟು ಮಾಡಬಲ್ಲದು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕು ಕೇವಲ ಶ್ವಾಸಕೋಶ, ಹೃದಯಕ್ಕೆ ಮಾತ್ರ ತೊಂದರೆ ನೀಡುವುದಲ್ಲದೆ ಮೆದುಳಿಗೆ ಸಂಬಂಧಿಸಿದ ರೋಗಗಳಿಗೂ ತುತ್ತಾಗಬಹುದು. ಉರಿಯೂತ, ಮನೋರೋಗ ಸೇರಿದಂತೆ ನರ ವೈಜ್ಞಾನಿಕ ತೊಡಕುಗಳಿಗೂ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಯೂನಿವರ್ಸಿಟಿ ಕಾಲೇಜ್ ಲಂಡನ್(ಯುಸಿಎಲ್)ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 43 ರೋಗಿಗಳಿಗೆ ಪಾರ್ಶ್ವವಾಯು, ನರಹಾನಿ ಅಥವಾ ಇತರೆ ಗಂಭೀರ ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಹೀಗಾಗಿ ಕೊವಿಡ್ 19 ಮೆದುಳಿಗೂ ಕೂಡ ಹಾನಿ ಉಂಟು ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1918ರಲ್ಲಿ ಇನ್‌ಫ್ಲುಯೆನ್ಸಾ ಸಾಂಕ್ರಾಮಿಕದ ಬಳಿಕ 1920-1930ರ ದಶಕದಲ್ಲಿ ಎನ್ಸೆಪಾಲಿಟಿಸ್ ಲೆಥಾರ್ಜಿಕಾ ರೋಗ ಕಾಣಿಸಿಕೊಂಡಿತ್ತು. ಇದು ಮೆದುಳನ್ನು ನಿಷ್ಕ್ರಿಯಗೊಳಿಸುತ್ತಿತ್ತು.

ಈಗ ಹೊಸದಾಗಿ ಬಂದಿರುವ ಕೊವಿಡ್ 19 ರೋಗವು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತೆ ಎಂದು ಹೇಳಲಾಗಿದ್ದರೂ, ಮೆದುಳಿನ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!