Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ಶಬರಿಮಲೆಗೆ ತೆರಳಿದ್ದ ವ್ಯಕ್ತಿ 18 ಮೆಟ್ಟಿಲು ಬಳಿ ಹೃದಯಾಘಾತದಿಂದ ಸಾವು

ಮಂಗಳೂರು; ಶಬರಿಮಲೆಗೆ ತೆರಳಿದ್ದ ವ್ಯಕ್ತಿ 18 ಮೆಟ್ಟಿಲು ಬಳಿ ಹೃದಯಾಘಾತದಿಂದ ಸಾವು

- Advertisement -
- Advertisement -

ಮಂಗಳೂರು; ಶಬರಿಮಲೆಗೆ ತೆರಳಿದ್ದ ವ್ಯಕ್ತಿ 18 ಮೆಟ್ಟಿಲು ಹತ್ತುತ್ತಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಾಟಿಪಳ್ಳ ನಿವಾಸಿ ಸಂದೀಪ್‌ ಶೆಟ್ಟಿ (37) ಶುಕ್ರವಾರ ಅವರ 10 ವರ್ಷದ ಮಗನ ಹರಕೆಯ ಸಲುವಾಗಿ ಮಗನ ಜತೆ ಶಬರಿಮಲೆಗೆ ತಂಡದೊಂದಿಗೆ ತೆರಳಿದ್ದಾರೆ.

ಶನಿವಾರ ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲು ಬಳಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಕಾಟಿಪಳ್ಳ ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿ, ಕೇಸರಿ ಯುವಕ ಮಂಡಲದ ಪದಾಧಿಕಾರಿಯಾಗಿದ್ದರು. ನಿತ್ಯಾನಂದ ಕೆಟರರ್ಸ್‌ ಅನ್ನು ನಡೆಸುತ್ತಿದ್ದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!