Friday, May 17, 2024
Homeಇತರಕೊರೊನಾ ಸಂಕಷ್ಟದ ಮಧ್ಯೆ ಗ್ರಾಹಕರಿಗೆ ಎಸ್ ಬಿ ಐ ನಿಂದ ಬಂಪರ್ ಗಿಫ್ಟ್

ಕೊರೊನಾ ಸಂಕಷ್ಟದ ಮಧ್ಯೆ ಗ್ರಾಹಕರಿಗೆ ಎಸ್ ಬಿ ಐ ನಿಂದ ಬಂಪರ್ ಗಿಫ್ಟ್

spot_img
- Advertisement -
- Advertisement -

ಕೊರೊನಾದಿಂದಾಗಿ  ದೇಶದ ಆರ್ಥಿಕತೆ ಯಾವ ಹಂತಕ್ಕೆ ಬಂದು ತಲುಪಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಬಡವರಿಗೆ, ಸಾಮಾನ್ಯ ವರ್ಗದವರಿಗೆ ಜೀವನ ನಡೆಸೋದೇ ಬಹುದೊಡ್ಡ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಖುಷಿಯ ಸಮಾಚಾರವೊಂದನ್ನು ಹೇಳಿದೆ.

ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ಘೋಷಣೆ ಮಾಡಿದೆ. ಅಲ್ಪಾವಧಿಯ ಎಂಸಿಎಲ್‌ಆರ್ ದರವನ್ನು ಶೇಕಡಾ 0.05 ರಿಂದ ಶೇ 0.10 ಕ್ಕೆ ಇಳಿಸುವುದಾಗಿ ಬ್ಯಾಂಕ್ ಘೋಷಿಸಿದೆ. ಈ ನಿರ್ಧಾರದ ನಂತರ ಎಸ್‌ಬಿಐ ದರ ಶೇಕಡಾ 6.65 ಕ್ಕೆ ಇಳಿದಿದೆ. ಪ್ರಸ್ತುತ ಎಂಸಿಎಲ್‌ಆರ್ ದರಗಳು ದೇಶದಲ್ಲಿ ಅತ್ಯಂತ ಕಡಿಮೆ ಎಂದು ಎಸ್‌ಬಿಐ ಹೇಳಿಕೊಂಡಿದೆ. ಜುಲೈ 10 ರಿಂದ ಹೊಸ ದರಗಳು ಅನ್ವಯವಾಗುತ್ತವೆ. ಜೂನ್‌ನಲ್ಲಿ ಎಸ್‌ಬಿಐ ಬಡ್ಡಿದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದಿದೆ.

ಜೂನ್ 10 ರಂದು ಎಸ್‌ಬಿಐನ ಎಂಸಿಎಲ್‌ಆರ್ ದರಗಳು ಶೇಕಡಾ 0.25 ರಿಂದ ಶೇಕಡಾ 7 ಕ್ಕೆ ಇಳಿದವು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುಕೋ ಬ್ಯಾಂಕ್ ಈಗಾಗಲೇ ರೆಪೊ ಮತ್ತು ಎಂಸಿಎಲ್‌ಆರ್ ಸಂಬಂಧಿಸಿದ ಸಾಲದ ದರವನ್ನು ಕಡಿಮೆ ಮಾಡಿವೆ.

- Advertisement -
spot_img

Latest News

error: Content is protected !!