Monday, April 29, 2024
Homeತಾಜಾ ಸುದ್ದಿಮನೆ ಮೆನೆಗೆ ತೆರಳಿ ಪಾಠ ಮಾಡುತ್ತಿದ್ದ ಶಿಕ್ಷಕಿಯ ದರೋಡೆ: 90 ಗ್ರಾಂ ಬಂಗಾರ ಕೊಟ್ಟು ಜೀವ...

ಮನೆ ಮೆನೆಗೆ ತೆರಳಿ ಪಾಠ ಮಾಡುತ್ತಿದ್ದ ಶಿಕ್ಷಕಿಯ ದರೋಡೆ: 90 ಗ್ರಾಂ ಬಂಗಾರ ಕೊಟ್ಟು ಜೀವ ಉಳಿಸಿಕೊಂಡ ‘ವಿದ್ಯಾಗಮ’ ಶಿಕ್ಷಕಿ

spot_img
- Advertisement -
- Advertisement -

ಶಿವಮೊಗ್ಗ: ಮಕ್ಕಳು ಇರುವಲ್ಲಿಗೆ ಹೋಗಿ ಕಲಿಸಬೇಕಾದ ಸರಕಾರದ ವಿದ್ಯಾಗಮ ಯೋಜನೆಗಾಗಿ ಮನೆ ಮನೆಗೆ ಹೋಗುವ ಸಮಯದಲ್ಲಿ ಶಿಕ್ಷಕಿಯನ್ನ ದರೋಡೆ ಮಾಡಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕೊಲ್ಲೂರ ರಸ್ತೆಯ ಸಮೀಪ ನಡೆದಿದೆ.

ಶಿವಮೊಗ್ಗ ಸಮೀಪದ ಕೊಡತೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಆರ್.ಮಂಜುಳಾರೇ ದರೋಡೆಗೆ ಒಳಗಾಗ ಶಿಕ್ಷಕಿಯಾಗಿದ್ದು, ಜೀವ ಉಳಿಸಿಕೊಳ್ಳಲು 90 ಗ್ರಾಂ ಬಂಗಾರದ ತಾಳಿ ಸರ ಮತ್ತು ಬಳೆಯನ್ನ ಬಿಚ್ಚಿಕೊಟ್ಟು ಬಂದಿರುವ ದುರ್ಘಟನೆ ನಡೆದಿದೆ.

ಶಿಕ್ಷಕಿ ಮಂಜುಳಾ

ಎಂದಿನಂತೆ ಮಕ್ಕಳ ಬಳಿಗೆ ಹೊರಟಿದ್ದ ಶಿಕ್ಷಕಿ ಮಂಜುಳಾರಿಗೆ ಬೈಕಿನಲ್ಲಿ ಬಂದು ಮೂವರು ಚಾಕು ತೋರಿಸಿ ಭಯ ಬೀಳಿಸಿದ್ದಾರೆ. ಕುಂದಾಪುರ ಕನ್ನಡದಲ್ಲಿ ಮಾತನಾಡುತ್ತಿದ್ದ ಮೂವರು, ಬಂಗಾರದ ಆಭರಣವನ್ನ ಬಿಚ್ಚಿ ಕೊಡದೇ ಇದ್ದರೇ ಪ್ರಾಣ ತೆಗೆಯುವುದಾಗಿ ಹೇಳಿದ್ದಾರೆ.
ದರೋಡೆಕೋರರ ಮಾತಿನಿಂದ ಜೀವ ಉಳಿದರೇ ಸಾಕು ಎಂದು ಶಿಕ್ಷಕಿ ಮಂಜುಳಾ ತಾಳಿ ಸರ ಮತ್ತು ಬಂಗಾರದ ಬಳೆಗಳನ್ನ ಬಿಚ್ಚಿಕೊಟ್ಟು ಬಚಾವಾಗಿದ್ದಾರೆ.

ಮುಖಕ್ಕೆ ಮಾಸ್ಕ್ ಹಾಕಿದ್ದ ಮೂವರು ಒಂದೇ ಬೈಕಿನಲ್ಲಿ ಬಂದಿದ್ದರು. ಅಷ್ಟೇ ಅಲ್ಲ, ಬೈಕಿನ ನಂಬರ ಕಾಣದಂತೆ ಮರೆಮಾಚಿದ್ದರು ಎಂದು ಹೇಳಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕಿಯ ಸಮೇತ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.

ಖಾಸಗಿ ಶಿಕ್ಷಣ ಸಂಸ್ಥೆ ವಾಟ್ಸಾಪ್ ಮೂಲಕ ಆನ್ಲೈನ್ ಮೂಲಕ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿರುವಾಗ ಸರಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು ಮಕ್ಕಳು ಇರುವಲ್ಲಿಗೆ ಹೋಗಿ ಕಲಿಸಬೇಕಾದ ಅನಿವಾರ್ಯತೆ ಇದೆ. ಆದರೆ ಕಾಡು ಗುಡ್ಡ ಎಂದು ಲೆಕ್ಕಿಸದೆ ಮಕ್ಕಳ ಮನೆ ಮನೆಗೆ ತೆರಳುವ ಶಿಕ್ಷಕರಿಗೆ ಯಾವುದೇ ರೀತಿಯ ರಕ್ಷಣಾ ವ್ಯವಸ್ಥೆ ಮಾಡುವಲ್ಲಿ ರಾಜ್ಯ ಸರ್ಕಾರ ವೈಫಲ್ಯ ಕಂಡಿರುವುದು ಈ ಘಟನೆಯಲ್ಲಿ ಸಾಬೀತಾಗಿದೆ. ಹಾಗೆಯೆ ಈ ಘಟನೆಯಿಂದ ಲಕ್ಷಾಂತರ ಶಿಕ್ಷಕರು ನಾಳೆಯ ತಮ್ಮ ಭದ್ರತೆಯ ಬಗ್ಗೆ ಆತಂಕ ಪಡುತ್ತಿರುವುದು ಸುಳ್ಳಲ್ಲ.

- Advertisement -
spot_img

Latest News

error: Content is protected !!