Wednesday, May 15, 2024
Homeತಾಜಾ ಸುದ್ದಿಆಯುರ್ವೇದ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯ ಬಂಧನ

ಆಯುರ್ವೇದ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯ ಬಂಧನ

spot_img
- Advertisement -
- Advertisement -

ಬೆಂಗಳೂರು: ಹರ್ಬಲ್ ಉತ್ಪನ್ನ ಮಾರಾಟ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆ ಪೊಲೀಸರು ಹರ್ಬಲ್ ಆಯುರ್ವೇದ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಸಂಜೀವಿನಿ ನಗರದಲ್ಲಿರುವ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ.

ಪ್ರೇಮಾ(38), ರಾಮು(49) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಲವ್ ಮ್ಯಾರೇಜ್ ಆಗಿದ್ದ ಇವರು ನಂತರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ತಿಳಿಸು ಬಂದಿದೆ. ಬಡ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿ, ಅವರಿಗೆ ಹಣದ ಆಸೆ ತೋರಿಸಿ ಮಾಂಸ ದಂಧೆಗೆ ಇಳಿಸುತ್ತಿದ್ದರು ಎನ್ನಲಾಗಿದೆ.

ಸಂಜೀವಿನಿ ನಗರದಲ್ಲಿ ಹರ್ಬಲ್ ಲೈಫ್ ಆಯುರ್ವೇದ ಕೇಂದ್ರ ನಡೆಸುತ್ತಿರುವ ಈ ಡೆಡ್ಲಿ ದಂಪತಿ, ಈ ಕೇಂದ್ರವನ್ನೇ ವೇಶ್ಯಾವಾಟಿಕೆಯ ಅಡ್ಡವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ನಾಲ್ಕು ವರ್ಷದ ಮಗುವಿರುವ ಬಡ ತಾಯಿಯನ್ನು ಮಾಂಸ ದಂಧೆಗಾಗಿ ಕರೆದುಕೊಂಡು ಬಂದಿದ್ದಾರೆ. ತನ್ನ ಮಗುವಿನ ಹೊಟ್ಟೆ ತುಂಬಿಸಲು ಆ ತಾಯಿ ಮೈಮಾರಿಕೊಳ್ಳಲು ಸಿದ್ಧವಾಗಿದ್ದಾರೆ. ಜೊತೆಗೆ ಗಿರಾಕಿಯಿಂದ 800 ರೂ. ಪಡೆದು ಆ ತಾಯಿಗೆ 200 ರೂ. ನೀಡುತ್ತಿದ್ದರು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

- Advertisement -
spot_img

Latest News

error: Content is protected !!