Wednesday, June 3, 2026
Homeತಾಜಾ ಸುದ್ದಿನಟಿ ತಮನ್ನಾ ಭಾಟಿಯಾ ಕೊರೋನಾ ವರದಿ ಬಹಿರಂಗ: ಪೋಷಕರಿಗೆ ಸೋಂಕು ದೃಢ

ನಟಿ ತಮನ್ನಾ ಭಾಟಿಯಾ ಕೊರೋನಾ ವರದಿ ಬಹಿರಂಗ: ಪೋಷಕರಿಗೆ ಸೋಂಕು ದೃಢ

- Advertisement -
- Advertisement -

ಮುಂಬೈ: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರ ತಂದೆ ಮತ್ತು ತಾಯಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ವಿಚಾರವನ್ನು ಸ್ವತಃ ತಮನ್ನಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

ತಮನ್ನಾ ತನ್ನ ಪೋಸ್ಟ್ನಲ್ಲಿ, “ನನ್ನ ಪೋಷಕರು ಮತ್ತು ನಾನು ಕೊರೊನಾ ಟೆಸ್ಟ್ ಗೆ ಒಳಗಾಗಿದ್ದು, ನನ್ನ ವರದಿ ನೆಗೆಟಿವ್ ಬಂದಿದೆ. ಆದರೆ ನನ್ನ ತಂದೆ ಸಂತೋಷ್ ಭಾಟಿಯಾ ಮತ್ತು ತಾಯಿ ರಜನಿ ಭಾಟಿಯಾ ಅವರ ವರದಿ ಪಾಸಿಟಿವ್ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ‘ಬಾಹುಬಲಿ’ ಚಿತ್ರದ ನಾಯಕಿ ತಿಳಿಸಿದ್ದಾರೆ.

ನಾನು ಮತ್ತು ನನ್ನ ಸಿಬ್ಬಂದಿ ಸೇರಿದಂತೆ ನಮ್ಮ ಮನೆಯ ಉಳಿದ ಎಲ್ಲ ಸದಸ್ಯರಿಗೂ ಕೊರೊನಾ ನೆಗೆಟಿವ್ ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ಪೋಷಕರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಮನವಿ ಮಾಡುತ್ತೇನೆ. ನೀವು ಕೂಡ ನನ್ನ ಪೋಷಕರಿಗಾಗಿ ಪ್ರಾರ್ಥಿಸಿ ಎಂದು ತಮನ್ನಾ ಇನ್ಸ್ಟಾಗ್ರಾಮ್ ಮೂಲಕ ಕೇಳಿಕೊಂಡಿದ್ದಾರೆ.

- Advertisement -

Latest News

error: Content is protected !!