Saturday, July 18, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು ಬರೋಬ್ಬರಿ 8,580 ಮಂದಿಗೆ ಕೊರೊನಾ ಪಾಸಿಟಿವ್, 133 ಮಂದಿ ಕೋವಿಡ್ ಗೆ ಬಲಿ

ರಾಜ್ಯದಲ್ಲಿಂದು ಬರೋಬ್ಬರಿ 8,580 ಮಂದಿಗೆ ಕೊರೊನಾ ಪಾಸಿಟಿವ್, 133 ಮಂದಿ ಕೋವಿಡ್ ಗೆ ಬಲಿ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿಂದು 8,580 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,00406 ಕ್ಕೇರಿದೆ. ಇಂದು ಕೊರೊನಾಗೆ 133 ಮಂದಿ ಬಲಿಯಾಗಿದ್ದು, ಇದುವರೆಗೂ ಒಟ್ಟು 5,091 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 83,608 ಕೊರೊನಾ ಪಾಸಿಟಿವ್ ಕೇಸುಗಳಿದ್ದು, 2,11,688 ಮಂದಿ ಗುಣಮುಖರಾಗಿದ್ದಾರೆ. ಇಂದು 7,249 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿಂದು ಅತೀ ಹೆಚ್ಚು ಕೇಸುಗಳು ದಾಖಲಾಗಿವೆ. 3,284 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,15,371ಕ್ಕೇರಿದೆ. ಇನ್ನು ಇಂದು 31 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಸದ್ಯ ರಾಜಧಾನಿಯಲ್ಲಿ 36,053 ಪಾಸಿಟಿವ್ ಕೇಸುಗಳಿದ್ದು, 77,531 ಮಂದಿ ಗುಣಮುಖರಾಗಿದ್ದಾರೆ. ಇಂದು 2,630 ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಒಟ್ಟು 1,786 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!