ನ್ಯೂಯಾರ್ಕ್: ವರದಿಗಾರನೊಬ್ಬ ಪ್ಯಾಂಟ್ ಇಲ್ಲದೆ ಕ್ಯಾಮರಾ ಎದುರು ಬಂದು ವರದಿ ಮಾಡಿ, ಸುದ್ದಿಯಾಗಿದ್ದಾನೆ. ಎಬಿಸಿ ನ್ಯೂಸ್ ಚಾನಲ್ ನ ಪ್ರಸಿದ್ಧ ಕಾರ್ಯಕ್ರಮ ‘ಗುಡ್ ಮಾರ್ನಿಂಗ್ ಅಮೆರಿಕಾ’ ದಲ್ಲಿ ಸ್ಟಾರ್ ಕ್ರಿಸ್ಟೋಪರ್ ರೀವ್ ಪ್ಯಾಂಟ್ ಇಲ್ಲದೆ ಕೇವಲ ಕೋಟ್ ಧರಿಸಿ ತಮ್ಮ ಮನೆಯಲ್ಲೇ ಕುಳಿತು ವರದಿ ನೀಡಿದ್ದಾರೆ.
ಹಿರಿಯರಿಗೆ ಡ್ರೋಣ್ ಮೂಲಕ ಔಷಧ ಪೂರೈಸುವ ಯೋಜನೆಯ ಬಗ್ಗೆ ಅವರು ಸ್ಟುಡಿಯೋದಲ್ಲಿ ಕುಳಿತ ಆಯಂಕರ್ ಜತೆ ಲೈವ್ ನಲ್ಲಿ ಚರ್ಚಿಸಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಪ್ಯಾಂಟ್ ಇಲ್ಲದೇ ವರದಿ ನೀಡಿದ ಪೋಟೋವನ್ನು ಸ್ವತಃ ರೀವ್ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಕರೋನಾ ಲಾಕ್ ಡೌನ್ ಕಾರಣದಿಂದ ಹಲವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದವರೂ ಅದಕ್ಕೆ ಹೊರತಾಗಿಲ್ಲ. ವರ್ಕ್ ಫ್ರಂ ಹೋಂ ತಿಳಿದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಲೈವ್ ಟೆಲಿಕಾಸ್ಟ್ ಆಗುವ ಟಿವಿ ಶೋಗಳಿಗಂತೂ ತುಂಬಾ ಕಷ್ಟ. ಎರಡು ದಿನದ ಹಿಂದೆ ಕೆಸಿಆರ್‌ಎ ವರದಿಗಾರ್ತಿ ಮೆಲಿಂಡಾ ಮೇಜಾ ಮನೆಯಿಂದ ವರದಿ ನೀಡುತ್ತಿರುವ ಸಂದರ್ಭದಲ್ಲಿ ಆಕೆಯ ಪತಿ ವಿವಸ್ತ್ರವಾಗಿ ಕ್ಯಾಮರಾ ಎದುರು ಆಗಮಿಸಿದ್ದರು. ಆ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.