ಬೆಂಗಳೂರು : ಅಂತರ ರಾಜ್ಯಗಳಿಗೆ ತೆರಳಲು ಅವಕಾಶಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಸಂಬಂಧ ರಾಜ್ಯಕ್ಕೂ ಸುತ್ತೋಲೆಯ ಮೂಲಕ ಸೂಚನೆ ನೀಡಿದೆ. ಹೀಗಾಗಿ ಅಂತರ ರಾಜ್ಯಗಳಿಗೆ ತೆರಳುವ ವಾಹನಗಳಿಗೆ ನಾಳೆಯಿಂದ ಅವಕಾಶ ಮಾಡಿಕೊಡಲಾಗುತ್ತದೆ ಎಂಬುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಇಂದು ನಡೆದಂತ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿಯವರು, ರಾಜ್ಯದಲ್ಲಿ ಆರ್ಥಿಕ ಸಂಪತ್ತಿನ ಕ್ರೂಢೀಕರಣಕ್ಕೆ ಸಂಬಂಧಿಸಿದಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೈಗಾರಿಕೆಗಳನ್ನು ತೆರೆಯುವ ಸಂಬಂಧ ಅನುಮತಿ ನೀಡಲಾಗಿದೆ ಎಂದರು.
ಇನ್ನೂ ಮುಂದುವರೆದು, ಕೇಂದ್ರ ಸರ್ಕಾರದಿಂದ ಸೂಚನೆಯೊಂದು ಬಂದಿದೆ. ಅಂತರ ರಾಜ್ಯಗಳಿಗೆ ವಾಹನಗಳು ತೆರಳಲು ಅವಕಾಶ ಮಾಡಿಕೊಂಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ರಾಜ್ಯದಿಂದ ಹೊರ ರಾಜ್ಯಗಳಿಗೆ ವಾಹನ ಸವಾರರು ತೆರಳುತ್ತಾರೆ ಎಂದ್ರೇ, ಅದಕ್ಕೆ ನಾಳೆಯಿಂದ ಅವಕಾಶ ಮಾಡಿಕೊಡಲಾಗುತ್ತಿದೆ. ಹೊರ ರಾಜ್ಯಗಳಿಗೆ ತೆರಳುತ್ತೇವೆ ಎಂದು ವಾಹನ ಸವಾರರು ಮುಂದೆ ಬಂದ್ರೆ ಅವರಿಗೆ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸುತ್ತಾರೆ. ಆನಂತ್ರ ಇದು ಜಾರಿಯಾಗಲಿದೆ ಎಂದು ತಿಳಿಸಿದರು.