Tuesday, June 9, 2026
Homeಕರಾವಳಿಮಂಗಳೂರುಕಡಬ: ವಿವಾಹಿತ ಯುವತಿ ದಿಢೀರ್ ನಾಪತ್ತೆ

ಕಡಬ: ವಿವಾಹಿತ ಯುವತಿ ದಿಢೀರ್ ನಾಪತ್ತೆ

- Advertisement -
- Advertisement -

ಕಡಬ: ವಿವಾಹಿತ ಯುವತಿಯೊಬ್ಬಳು ದಿಢೀರ್ ನಾಪತ್ತೆಯಾಗಿರುವ ಘಟನೆ ನೂಜಿಬಾಳ್ತಿಲ ಗ್ರಾಮದ ಕಲ್ಪುಗುಡ್ಡೆಯಲ್ಲಿ ನಡೆದಿದೆ.

ನೂಜಿಬಾಳ್ತಿಲ ಗ್ರಾಮದ ನೀರಾರಿ ಮನೆ ನಿವಾಸಿ ಮೊಹಮ್ಮದ್ ಆಶಿಕ್ ಎಂಬವರ ಪತ್ನಿ ಆರ್ ಫೈನ್ ಮಹ್ತಾಬ್ (18) ನಾಪತ್ತೆಯಾದವರು.

ಆರ್ ಫೈನ್ ಮಹ್ತಾಬ್ ಅವರು ದಿನಾಂಕ 07.06.2026 ರಂದು ಮನೆಯಿಂದ ಹೊರಗೆ ಹೋಗಿದ್ದು, ಬಳಿಕ ಮನೆಗೆ ಮರಳಿ ಬಂದಿರುವುದಿಲ್ಲ. ಅಲ್ಲದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ಸಂಖ್ಯೆ: 68/2026 ರಂತೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಾಣೆಯಾದವರ ಚಹರೆ ವಿವರ:

ಹೆಸರು: ಆರ್ ಫೈನ್ ಮಹ್ತಾಬ್

ವಯಸ್ಸು: 18 ವರ್ಷ

ಗಂಡನ ಹೆಸರು: ಮೊಹಮ್ಮದ್ ಆಶಿಕ್

ವಿಳಾಸ: ನೀರಾರಿ ಮನೆ, ಕಲ್ಪುಗುಡ್ಡೆ, ನೂಜಿಬಾಳ್ತಿಲ ಗ್ರಾಮ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

ದೈಹಿಕ ಚಹರೆ: 162 ಸೆಂ.ಮೀ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹಾಗೂ ಕಪ್ಪು ಬಣ್ಣದ ತಲೆಕೂದಲು ಹೊಂದಿರುತ್ತಾರೆ.

ಧರಿಸಿದ್ದ ಉಡುಪು: ಕಾಣೆಯಾಗುವಾಗ ನೀಲಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ರವಿಕೆ (ಬ್ಲೌಸ್) ಧರಿಸಿದ್ದರು.

ಭಾಷೆ: ಕನ್ನಡ ಮತ್ತು ಉರ್ದು ಭಾಷೆಗಳನ್ನು ಮಾತ್ರ ಮಾತನಾಡುತ್ತಾರೆ. ಯುವತಿಯ ಮುಖಚಹರೆ ಅಥವಾ ವಿವರಗಳಿಗೆ ಹೋಲುವ ಯಾವುದೇ ವ್ಯಕ್ತಿ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ಕೋರಲಾಗಿದೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:ಕಡಬ ಪೊಲೀಸ್ ಠಾಣೆ: 08251-260044 ,ಮೊಬೈಲ್ ಸಂಖ್ಯೆ: 9480805364

- Advertisement -

Latest News

error: Content is protected !!