Wednesday, November 4, 2026
Homeಮನರಂಜನೆಬಿಡುಗಡೆಗೂ ಮುನ್ನವೇ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ 73 ಕೋಟಿ ರೂ. ಗಳಿಸಿದ ‘ರಾಮಾಯಣ: ಭಾಗ 1’

ಬಿಡುಗಡೆಗೂ ಮುನ್ನವೇ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ 73 ಕೋಟಿ ರೂ. ಗಳಿಸಿದ ‘ರಾಮಾಯಣ: ಭಾಗ 1’

- Advertisement -
- Advertisement -

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಹಾಗೂ ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಸಿನಿಮಾ ನವೆಂಬರ್ 5ರಂದು ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ.

ಭಾರತದಲ್ಲಿ ಐದು ದಿನಗಳ ಪ್ರದರ್ಶನಕ್ಕೆ ನಡೆದ ಮುಂಗಡ ಬುಕ್ಕಿಂಗ್ ಮೂಲಕ ಚಿತ್ರವು ಒಟ್ಟು 73.40 ಕೋಟಿ ರೂ. ಗಳಿಸಿದೆ. ಬ್ಲಾಕ್ ಸೀಟ್‌ಗಳನ್ನು ಹೊರತುಪಡಿಸಿದರೆ 58.57 ಕೋಟಿ ರೂ. ಮೌಲ್ಯದ ಟಿಕೆಟ್‌ಗಳು ಬುಕ್ ಆಗಿವೆ. ಇನ್ನು ಪ್ರೀಮಿಯರ್ ಪ್ರದರ್ಶನದ ಮುಂಗಡ ಬುಕ್ಕಿಂಗ್ ಮೊತ್ತವೇ 32.41 ಕೋಟಿ ರೂ. ತಲುಪಿದೆ.

ರಾಜ್ಯವಾರು ಮೊದಲ ದಿನದ ಮುಂಗಡ ಟಿಕೆಟ್ ಬುಕಿಂಗ್ ಗಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 5.90 ಕೋಟಿ ರೂ. ಮೌಲ್ಯದ ಟಿಕೆಟ್‌ಗಳು ಬುಕ್ ಆಗಿದ್ದರೆ, ಮಹಾರಾಷ್ಟ್ರ 5.59 ಕೋಟಿ ರೂ. ಹಾಗೂ ದೆಹಲಿ 4.34 ಕೋಟಿ ರೂ. ಗಳಿಕೆಯೊಂದಿಗೆ ನಂತರದ ಸ್ಥಾನಗಳಲ್ಲಿವೆ. ತೆಲಂಗಾಣ 2.59 ಕೋಟಿ ರೂ. ಗಳಿಕೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಇದುವರೆಗೆ ದೇಶಾದ್ಯಂತ 60,124 ಪ್ರದರ್ಶನಗಳಿಗೆ ಒಟ್ಟು 18.67 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಗಳು ತಿಳಿಸಿವೆ.

- Advertisement -

Latest News

error: Content is protected !!