- Advertisement -


- Advertisement -
ಮಂಗಳೂರು: ತುಕ್ಕು ಹಿಡಿದ ಗೇಟ್ ಮುರಿದು ಬಿದ್ದ ಘಟನೆ; ರೈಲ್ವೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!
ಮಂಗಳೂರಿನ ಪಾಂಡೇಶ್ವರ ರೈಲ್ವೆ ಕ್ರಾಸಿಂಗ್ನಲ್ಲಿ ತುಕ್ಕು ಹಿಡಿದಿದ್ದ ರೈಲ್ವೆ ಗೇಟ್ ಮುರಿದು ಬಿದ್ದಿದೆ. ಈಗಾಗಲೇ ತೀವ್ರ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರದಾಡುತ್ತಿರುವ ಈ ಕ್ರಾಸಿಂಗ್ನಲ್ಲಿ ಗೇಟ್ ಮುರಿದು ಬಿದ್ದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ರೈಲ್ವೆ ಗೇಟ್ನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ರೈಲ್ವೆ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
- Advertisement -


