Wednesday, November 4, 2026
Homeತಾಜಾ ಸುದ್ದಿಕಡಬ ನ್ಯಾಯಾಲಯಕ್ಕೆ ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಜರು: ಶಿರಾಡಿಯಲ್ಲಿ ಇಂದು ಮಹಜರು

ಕಡಬ ನ್ಯಾಯಾಲಯಕ್ಕೆ ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಜರು: ಶಿರಾಡಿಯಲ್ಲಿ ಇಂದು ಮಹಜರು

- Advertisement -
- Advertisement -

ಕಡಬ: ಸರ್ಕಾರಕ್ಕೆ ಶರಣಾಗಿರುವ ಎಡಪಂಥೀಯ ಮಾವೋವಾದಿ ನಾಯಕಿ ಮುಂಡಗಾರು ಲತಾ (ಶ್ರೀಲತಾ)ಳನ್ನು ಪ್ರಕರಣವೊಂದರ ವಿಚಾರಣೆಗಾಗಿ ನವೆಂಬರ್ 3ರಂದು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಡಬ ಸಂಚಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

೨೦೧೮ರಲ್ಲಿ ಶಿರಾಡಿ ಗ್ರಾಮದ ಮಿತ್ತಮಜಲು ಸುರೇಶ್ ಹಾಗೂ ಲೀಲಾ ದಂಪತಿ ಮನೆಗೆ ಲತಾ ನೇತೃತ್ವದ ನಕ್ಸಲ್ ತಂಡ ಅಕ್ರಮವಾಗಿ ಪ್ರವೇಶಿಸಿ, ಬೆದರಿಕೆ ಹಾಕಿ ಊಟ ಮಾಡಿ ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ದೋಚಿ ಒಯ್ದಿತ್ತು. ಈ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಲತಾಳನ್ನು ಉಪ್ಪಿನಂಗಡಿ ಪೊಲೀಸರು ಕಡಬ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬುಧವಾರ (ನ.4) ಶಿರಾಡಿಯ ಮಿತ್ತಮಜಲಿನಲ್ಲಿ ಕೃತ್ಯ ನಡೆದ ಸ್ಥಳದ ಮಹಜರು ಪ್ರಕ್ರಿಯೆ ನಡೆಯಲಿದ್ದು, ಲತಾಳನ್ನು ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ.

ಬಳಿಕ ಗುರುವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪುನಃ ಬೆಂಗಳೂರಿನ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಡಬ ನ್ಯಾಯಾಲಯದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಆದಿವಾಸಿ ಕುಟುಂಬಕ್ಕೆ ಸೇರಿದ ಲತಾ, ೨೦೨೫ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸರ್ಕಾರಕ್ಕೆ ಶರಣಾಗತಿಯಾಗಿದ್ದರು.

- Advertisement -

Latest News

error: Content is protected !!