Wednesday, November 4, 2026
Homeಕರಾವಳಿಉಡುಪಿಮಣಿಪಾಲದಲ್ಲಿ ನಡುರಸ್ತೆಯಲ್ಲೇ ವಿದ್ಯಾರ್ಥಿಗಳ ಹೊಡೆದಾಟ; ಸಾಮಾಜಿಕ ಜಾಲತಾಣದಲ್ಲಿ ಹೊಡೆದಾಟದ ದೃಶ್ಯ ವೈರಲ್!

ಮಣಿಪಾಲದಲ್ಲಿ ನಡುರಸ್ತೆಯಲ್ಲೇ ವಿದ್ಯಾರ್ಥಿಗಳ ಹೊಡೆದಾಟ; ಸಾಮಾಜಿಕ ಜಾಲತಾಣದಲ್ಲಿ ಹೊಡೆದಾಟದ ದೃಶ್ಯ ವೈರಲ್!

- Advertisement -
- Advertisement -

ಉಡುಪಿ: ಮಣಿಪಾಲದಲ್ಲಿ ನಡುರಾತ್ರಿ ಯುವಕರ ಗುಂಪೊಂದು ರಸ್ತೆ ಮಧ್ಯೆಯೇ ಹೊಡೆದಾಡಿಕೊಂಡ ಘಟನೆ ನಡೆದಿದೆ. ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ಯುವಕರು ಪರಸ್ಪರ ಜಗಳವಾಡಿಕೊಂಡಿದ್ದು, ಮೊದಲು ಇಬ್ಬರ ನಡುವೆ ಆರಂಭವಾದ ಮಾತಿನ ಚಕಮಕಿ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿದೆ.

ಜನಸಂಚಾರವಿರುವ ರಸ್ತೆಯಲ್ಲೇ ನಡೆದ ಈ ಗಲಾಟೆ ಬಳಿಕ ಎರಡು ಗುಂಪುಗಳ ನಡುವಿನ ಹೊಡೆದಾಟಕ್ಕೆ ತಿರುಗಿದೆ. ಮಣಿಪಾಲ ಪೊಲೀಸ್ ಠಾಣೆಯಿಂದ ಕೆಲವೇ ಅಂತರದಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಣಿಪಾಲದಲ್ಲಿ ತಡರಾತ್ರಿಯವರೆಗೂ ಬಾರ್, ಪಬ್ ಹಾಗೂ ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ ನಿಗದಿತ ಸಮಯ ಮೀರಿ ಕಾರ್ಯನಿರ್ವಹಿಸುವ ಬಾರ್ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇದೀಗ ಪೊಲೀಸರ ಭಯವಿಲ್ಲದೆ ತಡರಾತ್ರಿವರೆಗೂ ಮದ್ಯ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂಬ ದೂರುಗಳು ವ್ಯಕ್ತವಾಗಿವೆ.

ಬಾರ್ ಹಾಗೂ ಪಬ್‌ಗಳ ಒಳಗೆ ನಡೆಯುತ್ತಿದ್ದ ಗಲಾಟೆಗಳು ಇದೀಗ ನಡುರಸ್ತೆಯಲ್ಲೇ ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯುವಕರ ಹೊಡೆದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!