Tuesday, November 3, 2026
Homeಪ್ರಮುಖ-ಸುದ್ದಿಹಿಂದುತ್ವ ಸಂಘಟನೆಗಳ ಪ್ರತಿಭಟನೆ ಬಳಿಕ ಮಾಲ್‌ನಲ್ಲಿದ್ದ ನಮಾಝ್ ಕೊಠಡಿ ಧ್ವಂಸ

ಹಿಂದುತ್ವ ಸಂಘಟನೆಗಳ ಪ್ರತಿಭಟನೆ ಬಳಿಕ ಮಾಲ್‌ನಲ್ಲಿದ್ದ ನಮಾಝ್ ಕೊಠಡಿ ಧ್ವಂಸ

- Advertisement -
- Advertisement -

ಮುಂಬೈ: ಶಾಪಿಂಗ್ ಮಾಲ್‌ನಲ್ಲಿದ್ದ ನಮಾಝ್ ಕೊಠಡಿಯೊಂದು ವಿವಾದಕ್ಕೆ ಕಾರಣವಾಗಿದ್ದು, ಹಿಂದುತ್ವ ಸಂಘಟನೆಗಳ ಪ್ರತಿಭಟನೆ ಬಳಿಕ ಅದನ್ನು ಧ್ವಂಸಗೊಳಿಸಲಾಗಿದೆ. ಮುಂಬೈನ ಮಲಾಡ್‌ನ ಇನ್‌ಆರ್ಬಿಟ್ ಮಾಲ್‌ನಲ್ಲಿದ್ದ ಪ್ರಾರ್ಥನಾ ಕೊಠಡಿಯನ್ನು ತೆರವುಗೊಳಿಸಲಾಗಿದೆ.

ಮಾಲ್‌ನಲ್ಲಿರುವ ಪ್ರಾರ್ಥನಾ ಕೊಠಡಿಯ ಸೌಲಭ್ಯಗಳನ್ನು ಪರಿಚಯಿಸಿ ಹಿಜಾಬ್ ಧರಿಸಿದ್ದ ಇಬ್ಬರು ಯುವತಿಯರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ವಿವಾದ ಆರಂಭವಾಯಿತು.ಪ್ರಾರ್ಥನಾ ಕೊಠಡಿಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇದ್ದು, ನಮಾಝ್‌ಗೂ ಮುನ್ನ ಕೈಕಾಲು ತೊಳೆಯಲು ಪ್ರತ್ಯೇಕ ಸೌಲಭ್ಯವಿದೆ ಎಂದು ಯುವತಿಯರು ವಿಡಿಯೋದಲ್ಲಿ ವಿವರಿಸಿದ್ದರು. ಅಲ್ಲದೆ, ಎಲ್ಲರೂ ತಮ್ಮ ದೈನಂದಿನ ಪ್ರಾರ್ಥನೆಗಳನ್ನು ತಪ್ಪದೆ ಮಾಡುವಂತೆ ಮನವಿ ಮಾಡಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಬಲಪಂಥೀಯ ವ್ಯಕ್ತಿಗಳು ಮತ್ತು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಶಾಪಿಂಗ್ ಮಾಲ್‌ನಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಪ್ರಾರ್ಥನಾ ಕೊಠಡಿ ಕಲ್ಪಿಸಿರುವುದೇಕೆ ಎಂದು ಪ್ರಶ್ನಿಸಿದವು. ಮುಂಬೈಯನ್ನು ಪಾಕಿಸ್ತಾನವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದೂ ಕೆಲವು ಸಾಮಾಜಿಕ ಜಾಲತಾಣ ಖಾತೆಗಳು ಆರೋಪಿಸಿದವು.

ಅಕ್ಟೋಬರ್ 30ರಂದು ‘ಸಕಲ ಹಿಂದೂ ಸಮಾಜ’ ಸಂಘಟನೆಯು ಈ ವಿಡಿಯೋವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡು, ಮಾಲ್‌ನಲ್ಲಿ ಪ್ರತ್ಯೇಕ ಪ್ರಾರ್ಥನಾ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಕೊಠಡಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿತು.

ಅಕ್ಟೋಬರ್ 31ರಂದು ಸಂಘಟನೆಯು ಮತ್ತೊಂದು ವಿಡಿಯೋ ಹಂಚಿಕೊಂಡಿತು. ಅದರಲ್ಲಿ ಕೊಠಡಿಯನ್ನು ತೆರವುಗೊಳಿಸುವ ಮುನ್ನ ಮತ್ತು ನಂತರದ ದೃಶ್ಯಗಳಿದ್ದವು. ಕೊಠಡಿಯ ನೆಲದ ಟೈಲ್‌ಗಳು ಒಡೆದಿರುವುದು ಹಾಗೂ ಒಂದು ಭಾಗವನ್ನು ಕಿತ್ತುಹಾಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

- Advertisement -

Latest News

error: Content is protected !!