Tuesday, November 3, 2026
Homeಪ್ರಮುಖ-ಸುದ್ದಿರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆ; ಪ್ರತಿ ಸ್ಟೇಜ್‌ಗೆ 10 ರೂ....

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆ; ಪ್ರತಿ ಸ್ಟೇಜ್‌ಗೆ 10 ರೂ. ನಿಗದಿ ; ಗುರುವಾರದಿಂದಲೇ ಪರಿಷ್ಕೃತ ಟಿಕೆಟ್ ದರ ಜಾರಿ ಸಾಧ್ಯತೆ

- Advertisement -
- Advertisement -

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಬಸ್ ಪ್ರಯಾಣ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆ ಕುರಿತು ನಾಳೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದ್ದು, ನವೆಂಬರ್ 5ರಿಂದಲೇ ಹೊಸ ದರ ಜಾರಿಗೆ ಬರಬಹುದು ಎನ್ನಲಾಗಿದೆ.

ದರ ಏರಿಕೆಯ ಪ್ರಮಾಣ ನಿರ್ಧರಿಸುವ ನಿಟ್ಟಿನಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ KSRTC, BMTC, NWKRTC ಹಾಗೂ KRTC ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಹಣಕಾಸು ವಿಭಾಗದ ಅಧಿಕಾರಿಗಳು, ಮುಖ್ಯ ಹಣಕಾಸು ಭದ್ರತಾ ಅಧಿಕಾರಿಗಳು (CFSO) ಮತ್ತು ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ಬಿಎಂಟಿಸಿ ಬಸ್ ದರ ಎಷ್ಟು ಹೆಚ್ಚಳ?

ಪ್ರಸ್ತುತ ಬಿಎಂಟಿಸಿ ನಗರ ಸಾರಿಗೆಯಲ್ಲಿ ಪ್ರತಿ 2 ಕಿ.ಮೀ.ಗೆ ಒಂದು ಸ್ಟೇಜ್ ಎಂದು ಪರಿಗಣಿಸಲಾಗುತ್ತಿದ್ದು, ಕನಿಷ್ಠ ಟಿಕೆಟ್ ದರ 6 ರೂ. ಇದೆ. ಇದನ್ನು 10 ರೂ.ಗೆ ಹೆಚ್ಚಿಸುವ ಪ್ರಸ್ತಾಪವನ್ನು ಸಾರಿಗೆ ಇಲಾಖೆ ಮುಂದಿಟ್ಟಿದೆ. ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಕೆಎಸ್‌ಆರ್‌ಟಿಸಿ – ನಿಗಮದಲ್ಲಿ ಪ್ರತಿ 6.5 ಕಿ.ಮೀ. ಅನ್ನು ಒಂದು ಹಂತ ಎಂದು ಪರಿಗಣಿಸಲಾಗಿದ್ದು, ಸಾಮಾನ್ಯ ಬಸ್‌ಗಳಲ್ಲಿ ಹಾಲಿ ಇರುವ 6 ರೂ. ದರವನ್ನು 10 ರೂ. ಕ್ಕೆ ಏರಿಸುವ ಸಾಧ್ಯತೆಯಿದೆ.

ಎಕ್ಸ್‌ಪ್ರೆಸ್ ಬಸ್‌ಗಳು – ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಪ್ರಸ್ತುತ ಪ್ರತಿ ಹಂತಕ್ಕೆ 12 ರೂ. ದರವಿದ್ದು, ಇದನ್ನು 15 ರೂ. ಅಥವಾ 18 ರೂ.ಗೆ ಪರಿಷ್ಕರಿಸುವ ಸಾಧ್ಯತೆ ಇದೆ.

- Advertisement -

Latest News

error: Content is protected !!