Sunday, September 27, 2026
Homeತಾಜಾ ಸುದ್ದಿಡ್ರಮ್ಮರ್ ‘ಕನ್ನಡ ಶಿವಮಣಿ’ ದೇವ್ ಇನ್ನಿಲ್ಲ: ಆರ್‌ಸಿಬಿ ಲೈವ್ ಬೀಟ್ ವಾದಕ ಅನಾರೋಗ್ಯದಿಂದ ನಿಧನ

ಡ್ರಮ್ಮರ್ ‘ಕನ್ನಡ ಶಿವಮಣಿ’ ದೇವ್ ಇನ್ನಿಲ್ಲ: ಆರ್‌ಸಿಬಿ ಲೈವ್ ಬೀಟ್ ವಾದಕ ಅನಾರೋಗ್ಯದಿಂದ ನಿಧನ

- Advertisement -
- Advertisement -

ಬೆಂಗಳೂರು: ತಮ್ಮ ವಿಭಿನ್ನ ಬೀಟ್ ಶೈಲಿ ಹಾಗೂ ಅದ್ಭುತ ವಾದನದ ಮೂಲಕ ದಕ್ಷಿಣ ಭಾರತದ ಸಂಗೀತ ಪ್ರಿಯರ ಮನಗೆದ್ದಿದ್ದ ಜನಪ್ರಿಯ ‘ಕನ್ನಡ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ (50) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ‘ಸ್ಕಂದಶ್ರೀ ಅಪಾರ್ಟ್‌ಮೆಂಟ್’ ನಿವಾಸದಲ್ಲಿ ಕೊನೆಯುಸಿರೆಳೆದ ಅವರು, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕನ್ನಡ ಚಿತ್ರರಂಗ ಸೇರಿದಂತೆ ಹಲವು ಬೃಹತ್ ಸಂಗೀತ ಸಂಜೆ ಹಾಗೂ ಪ್ರಮುಖ ವೇದಿಕೆ ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ದೇವ್, ಡ್ರಮ್ಸ್ ಬಾರಿಸುವ ವಿಶಿಷ್ಟ ಶೈಲಿಯಿಂದಾಗಿಯೇ ‘ಕನ್ನಡ ಶಿವಮಣಿ’ ಎಂದೇ ಪ್ರಸಿದ್ಧಿ ಪಡೆದಿದ್ದರು. ವಿಶೇಷವಾಗಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಆರ್‌ಸಿಬಿ’ ತಂಡದ ಪಂದ್ಯಗಳ ಸಂದರ್ಭದಲ್ಲಿ ಇವರು ನೀಡುತ್ತಿದ್ದ ಲೈವ್ ಬೀಟ್ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಲ್ಲಿ ಅಪಾರ ರೋಮಾಂಚನ ಮೂಡಿಸುತ್ತಿತ್ತು.

ಕಳೆದ ಜೂನ್ ತಿಂಗಳಲ್ಲಿ ದೇವ್ ಅವರಿಗೆ ಪಾರ್ಶ್ವವಾಯು ಕಾಣಿಸಿಕೊಂಡಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಬಂದಿತ್ತು. ಇದೇ ವೇಳೆ ತೀವ್ರ ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಡೆಸಿ ಬಲಗಾಲನ್ನು ತೆರವುಗೊಳಿಸಲಾಗಿತ್ತು. ಬಳಿಕ ಪಾರ್ಶ್ವವಾಯುವಿನ ತೀವ್ರತೆಯಿಂದ ಚೇತರಿಸಿಕೊಳ್ಳಲಾಗದೆ ತಮ್ಮ ನಿವಾಸದಲ್ಲೇ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಡ್ರಮ್ಮರ್ ದೇವ್ ಅವರ ಅಕಾಲಿಕ ಅಗಲಿಕೆಗೆ ಸ್ಯಾಂಡಲ್‌ವುಡ್ ಗಣ್ಯರು, ಸಂಗೀತ ನಿರ್ದೇಶಕರು, ಕ್ರಿಕೆಟ್ ಹಾಗೂ ಸಂಗೀತ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!