Thursday, November 12, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಬದಿಯ ಕಳೆ ಗಿಡಗಳನ್ನು ತೆರವುಗೊಳಿಸಿದ ಯುವಕರು

ಬೆಳ್ತಂಗಡಿ; ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಬದಿಯ ಕಳೆ ಗಿಡಗಳನ್ನು ತೆರವುಗೊಳಿಸಿದ ಯುವಕರು

- Advertisement -
- Advertisement -

ಬೆಳ್ತಂಗಡಿ; ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ ವತಿಯಿಂದ ಸೋಣಕುಮೇರು ಸೇತುವೆ ಬಳಿಯಿಂದ ಬೈಪಾಡಿವರೆಗಿನ ಮುಖ್ಯರಸ್ತೆಯ ಬದಿಯ ಇಕ್ಕೆಲದಲ್ಲಿದ್ದ ಗಿಡ ಗಂಟಿಗಳ ತೆರವಿನ ಸ್ವಚ್ಛತಾ ಕಾರ್ಯ ನವೆಂಬರ್ 11 ರಂದು ನಡೆಯಿತು.

ರಸ್ತೆಯ ಬದಿಯಲ್ಲಿ ದಟ್ಟವಾಗಿ ಹುಲ್ಲು ಬೆಳೆದಿರುವ ಪರಿಣಾಮ ನಡೆದುಕೊಂಡು ಹೋಗುವ ಶಾಲಾ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಈ ಕೆಲಸವನ್ನು ಯುವಕ ಮಂಡಲದಿಂದ ಶ್ರಮದಾನದ ಮೂಲಕ ಹುಲ್ಲು ಕತ್ತರಿಸುವ ಕೆಲಸವನ್ನು ನಡೆಸಲಾಯಿತು.ಈ ಕಾರ್ಯದಲ್ಲಿ ಶಶಿಧರ ಬಾಲಂಪಾಡಿ, ಸಂಪತ್ ಕರ್ಲೊಡಿ , ಲೋಹಿತ್ ಸೋಣಕುಮೇರು, ಪ್ರವೀಣ್ ಬಾಲಂಪಾಡಿ , ನವೀನ್ ಪ್ರಕಾಶ್ ಕರ್ಲೊಡಿ, ಕುಶಾಲಪ್ಪ  ಸೋಣಕುಮೇರು, ರಾಧಾಕೃಷ್ಣ ಪಾರೋಟ್ಟು, ಸತೀಶ್ ಬಾಲಾಂಪಾಡಿ, ಚಿದಾನಂದ ಬಾಲಂಪಾಡಿ, ಚೀತ್ರೇಶ್ ಬಾಲಂಪಾಡಿ, ಕೀರ್ತನ್ ಬಾಲಾಂಪಾಡಿ , ರಾಕೇಶ್ ಸೋಣಕುಮೇರು ಭಾಗವಹಿಸಿದ್ದರು. ಊರಿನ ಪ್ರಮುಖರು  ಹುಲ್ಲು ತೆಗೆಯುವ ಮಷೀನ್ ಗೆ ಪೆಟ್ರೋಲ್, ಹಾಗೂ ಶ್ರಮದಾನಿಗಳಿಗೆ ಜ್ಯೂಸ್, ಸಿಹಿತಿಂಡಿ ನೀಡಿ ಸಹಕರಿಸಿದರು. ಈ ಕಾರ್ಯಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

- Advertisement -

Latest News

error: Content is protected !!