Thursday, November 12, 2026
Homeಕರಾವಳಿಪಾಣೆಮಂಗಳೂರು–ಮೆಲ್ಕಾರ್‌ನ ಸ್ವರಾಜ್ ಸ್ಟುಡಿಯೋ ಮಾಲಕ ರಾಜರತ್ನ ಅವರ ಪುತ್ರಿ ನೇಹಾ ನಿಧನ

ಪಾಣೆಮಂಗಳೂರು–ಮೆಲ್ಕಾರ್‌ನ ಸ್ವರಾಜ್ ಸ್ಟುಡಿಯೋ ಮಾಲಕ ರಾಜರತ್ನ ಅವರ ಪುತ್ರಿ ನೇಹಾ ನಿಧನ

- Advertisement -
- Advertisement -

ಬಂಟ್ವಾಳ: ಪಾಣೆಮಂಗಳೂರು–ಮೆಲ್ಕಾರ್‌ನ ಸ್ವರಾಜ್ ಸ್ಟುಡಿಯೋ ಮಾಲಕ ರಾಜರತ್ನ ಅವರ ಪುತ್ರಿ ನೇಹಾ (29) ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಕಳೆದ ಒಂದು ವರ್ಷದಿಂದ ತಲೆಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದ ನೇಹಾ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನೇಹಾ ಅವರು ತಮ್ಮ ಪತಿ ಪ್ರತೀಕ್ ಅವರೊಂದಿಗೆ ಉದ್ಯೋಗ ನಿಮಿತ್ತ ಕುವೈತ್‌ನಲ್ಲಿ ನೆಲೆಸಿದ್ದರು. ಮೃತರ ಅಂತಿಮ ವಿಧಿವಿಧಾನಗಳು ಬಿ.ಸಿ.ರೋಡಿನ ಮಯ್ಯರಬೈಲಿನಲ್ಲಿರುವ ಪತಿಯ ಮನೆಯಲ್ಲಿ ನೆರವೇರಿಸಲಾಯಿತು.

ಮೃತರು ಪತಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!