- Advertisement -


- Advertisement -
ಕಾರ್ಕಳ: ಹಿರಿಯ ಶಿಕ್ಷಣ ತಜ್ಞ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಎನ್.ಆರ್. ಶೆಟ್ಟಿ (90) ಅವರು ಗುರುವಾರ (ನ.12) ಮುಂಜಾನೆ ನಿಧನರಾಗಿದ್ದಾರೆ. ಕಾರ್ಕಳದ ನಿಟ್ಟೆ ಗ್ರಾಮದ ಕುಂಟಲ್ಪಾಡಿಯಲ್ಲಿ ನೆಲೆಸಿದ್ದ ಅವರು ವಯೋಸಹಜ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ.
ಡಾ. ಎನ್.ಆರ್. ಶೆಟ್ಟಿ ಅವರು ಮಾಜಿ ಕೆಆರ್‌ಇಸಿ (ಇಂದಿನ ಎನ್‌ಐಟಿಕೆ) ಪ್ರಾಂಶುಪಾಲರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕರಾಗಿ ಮತ್ತು ಕಲಬುರಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಇದರ ಜೊತೆಗೆ, ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿದ್ದರು.
- Advertisement -


