Thursday, November 12, 2026
Homeಕರಾವಳಿಉಡುಪಿಉಡುಪಿ:ಕಣ್ಣಿಗೆ ಬೈಕ್ ಹೆಡ್‌ಲೈಟ್ ಬೆಳಕು ಬಿಟ್ಟು ವೃದ್ಧೆಯ ಚಿನ್ನದ ಸರ ಅಪಹರಣ

ಉಡುಪಿ:ಕಣ್ಣಿಗೆ ಬೈಕ್ ಹೆಡ್‌ಲೈಟ್ ಬೆಳಕು ಬಿಟ್ಟು ವೃದ್ಧೆಯ ಚಿನ್ನದ ಸರ ಅಪಹರಣ

- Advertisement -
- Advertisement -

ಉಡುಪಿ: ತರಕಾರಿ ಖರೀದಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕಣ್ಣಿಗೆ ಬೈಕ್ ಹೆಡ್‌ಲೈಟ್‌ನ ಪ್ರಖರ ಬೆಳಕು ಬಿಟ್ಟು, ಕುತ್ತಿಗೆಯಲ್ಲಿದ್ದ 1.5 ಪವನ್ ಚಿನ್ನದ ಸರವನ್ನು ದುಷ್ಕರ್ಮಿಗಳು ಕಿತ್ತು ಪರಾರಿಯಾದ ಘಟನೆ ಅಜ್ಜರಕಾಡು ಸಮೀಪ ಬುಧವಾರ ಸಂಜೆ ನಡೆದಿದೆ.

ಕಾನ್ವೆಂಟ್ ರೋಡ್ ನಿವಾಸಿ ಗೀತಾ ನಂಬಿಯಾರ್ (67) ಸರ ಕಳೆದುಕೊಂಡವರು. ಬುಧವಾರ ಸಂಜೆ 6.30ರ ಸುಮಾರಿಗೆ ಇವರು ಪೇಟೆಯಿಂದ ತರಕಾರಿ ತೆಗೆದುಕೊಂಡು ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದ 2ನೇ ಕ್ರಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮುಂದಕ್ಕೆ ಹೋಗಿ, ತಕ್ಷಣವೇ ಬೈಕ್ ತಿರುಗಿಸಿಕೊಂಡು ವಾಪಸ್ ಬಂದು ವೃದ್ಧೆಯ ಮುಖಕ್ಕೆ ನೇರವಾಗಿ ಹೆಡ್‌ಲೈಟ್ ಬೆಳಕು ಹಾಕಿದ್ದಾರೆ.

ತೀಕ್ಷ್ಣ ಬೆಳಕಿನಿಂದಾಗಿ ಗೀತಾ ಅವರು ಕಣ್ಣಿಗೆ ಕೈ ಅಡ್ಡ ಹಿಡಿದುಕೊಂಡ ತಕ್ಷಣ, ಹಿಂಬದಿ ಸವಾರ ಸುಮಾರು ₹1.50 ಲಕ್ಷ ಮೌಲ್ಯದ (ಲಕ್ಷ್ಮಿ ಪೆಂಡೆಂಟ್ ಇದ್ದ) ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ಈ ವೇಳೆ ದುಷ್ಕರ್ಮಿಗಳು ವೃದ್ಧೆಯನ್ನು ರಸ್ತೆಗೆ ತಳ್ಳಿದ್ದು, ಅವರ ಎಡಕೈ ಮೊಣಗಂಟಿಗೆ ಗಾಯವಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

- Advertisement -

Latest News

error: Content is protected !!