
ಪಶ್ಚಿಮ ಬಂಗಾಳ: 9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತಮ್ಮ 15 ವರ್ಷದ ಮಗನಿಗೆ ಪಶ್ಚಿಮ ಬಂಗಾಳದ ಅಕ್ಕಿ ಉದ್ಯಮಿಯೊಬ್ಬರು ಬರೋಬ್ಬರಿ ₹2.30 ಕೋಟಿ ಮೌಲ್ಯದ ಐಷಾರಾಮಿ ‘ಬಿಎಂಡಬ್ಲ್ಯೂ ಎಂ4 ಕಾಂಪಿಟಿಷನ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪುರ್ಬಾ ಬರ್ಧಮಾನ್ ಜಿಲ್ಲೆಯ ಉದ್ಯಮಿ ಶಂಸುದ್ದೀನ್ ಮಿದ್ಯಾ ತಮ್ಮ ಪುತ್ರ ಮೊಹಮ್ಮದ್ ತಲ್ಹಾಗೆ ಈ ದುಬಾರಿ ಉಡುಗೊರೆ ನೀಡಿದ ತಂದೆ. ಒಂದು ಕಾಲದಲ್ಲಿ ಮುಂಬೈನಲ್ಲಿ ಸಾಮಾನ್ಯ ಲೈಟ್‌ಮ್ಯಾನ್ ಆಗಿದ್ದ ಶಂಸುದ್ದೀನ್, ಪರಿಶ್ರಮದಿಂದ ಪ್ರಮುಖ ಉದ್ಯಮಿಯಾಗಿ ಬೆಳೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಈ ಕಾರು ಕೊಡಿಸುವುದಾಗಿ ಅವರು ಭರವಸೆ ನೀಡಿದ್ದರು. ಅದರಂತೆ ಮುಂಬೈನ ಅಂಧೇರಿ ಶೋರೂಮ್‌ನಿಂದ ಖರೀದಿಸಿದ ಕಾರನ್ನು ಕಂಟೇನರ್ ಮೂಲಕ ಸ್ವಗ್ರಾಮಕ್ಕೆ ತರಿಸಿದ್ದಾರೆ.
18 ವರ್ಷ ತುಂಬದ ಕಾರಣ ತಲ್ಹಾಗೆ ಸದ್ಯಕ್ಕೆ ಕಾರು ಚಲಾಯಿಸಲು ಅನುಮತಿಯಿಲ್ಲ. ತಂದೆಯ ಈ ದುಬಾರಿ ಉಡುಗೊರೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.


