Thursday, November 12, 2026
Homeಕರಾವಳಿಕಾಡು ಪ್ರಾಣಿ ಬೇಟೆಯಾಡಿದ ಪ್ರಕರಣ: ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು

ಕಾಡು ಪ್ರಾಣಿ ಬೇಟೆಯಾಡಿದ ಪ್ರಕರಣ: ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ಪಟ್ಟ ಜಾಗದಲ್ಲಿ ಅಪರಿಚಿತ ವ್ಯಕ್ತಿಗಳು ಬಂದೂಕು ಬಳಸಿ ಕಾಡುಪ್ರಾಣಿ ಬೇಟೆಯಾಡಿರುವ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಕುರ್ತೋಡಿ ಗುತ್ತು ಎಂಬಲ್ಲಿರುವ ಸ.ನಂ 112 ರ ರಾಧಾ ಎಂಬವರಿಗೆ ಸೇರಿದ ಫಾಮ್ ತೋಟದಲ್ಲಿ ಅಪರಿಚಿತ ವ್ಯಕ್ತಿಗಳು ಬಂದೂಕು ಬಳಸಿ ಕಾಡುಪ್ರಾಣಿಯನ್ನು ಬೇಟೆಯಾಡಿ ತೆಗೆದುಕೊಂಡ ಹೋಗಿರುವ ಬಗ್ಗೆ ಕುರಹುಗಳು ಮತ್ತು ರಕ್ತದ ಕಲೆಗಳು ಪತ್ತೆಯಾಗಿದೆ. ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಒ ಮಹೇಶ್ ದೇವಾಡಿಗ ಮತ್ತು ಸಿಬ್ಬಂದಿ ನ.10 ರಂದು ಘಟನಾ ಸ್ಥಳಕ್ಕೆ ಹೋಗಿ ರಕ್ತದ ಕಲೆಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಲಯಕ್ಕೆ ಕಳುಹಿಸಿದ್ದು. ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ನ.11 ರಂದು ಅಪರಿಚಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಕೂಡ ಇದೆ ಪರಿಸರದಲ್ಲಿ ಕಾಡುಪ್ರಾಣಿ ಬೇಟೆಯಾಡಿರುವ ರಕ್ತದ ಕುರುಹುಗಳು ಅರಣ್ಯ ಇಲಾಖೆಗೆ ಪತ್ತೆಯಾಗಿತ್ತು. ಇದನ್ನೆಲ್ಲ ಜೂಜಾಟ, ಕಾಡುಪ್ರಾಣಿ ಬೇಟೆಯಲ್ಲಿ ಪಳಗಿರುವ ಸ್ಥಳೀಯ ನಿವಾಸಿಯೊಬ್ಬನೇ ಈ ಕೃತ್ಯ ಮಾಡಿ ಬೇರೆಯವರ ವಿರುದ್ಧ ಸುಳ್ಳು ದೂರು ನೀಡುತ್ತಿರುವ ಬಗ್ಗೆ ಸ್ಥಳೀಯರಿಗೆ ಸಂಶಯ ಕಾಣುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈತನನ್ನು ಮೊದಲು ಅರಣ್ಯ ಇಲಾಖೆ ತನಿಖೆಗೆ ಒಳಪಡಿಸಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

- Advertisement -

Latest News

error: Content is protected !!