Tuesday, November 3, 2026
Homeಕರಾವಳಿಮಂಗಳೂರುತಾಲೂಕಿನ ಗರಿಮೆ ಹೆಚ್ಚಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಸಂತೋಷ್ ಕುಮಾರ್ ಲಾಯಿಲ

ತಾಲೂಕಿನ ಗರಿಮೆ ಹೆಚ್ಚಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಸಂತೋಷ್ ಕುಮಾರ್ ಲಾಯಿಲ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆಯುವ ಮೂಲಕ ತಾಲೂಕಿನ ಹಿರಿಮೆ ಹಾಗೂ ಗರಿಮೆಯನ್ನು ಹೆಚ್ಚಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪತ್ರಕರ್ತ ಮನೋಹರ ಬಳೆಂಜ, ಸಮಾಜ ಸೇವಾ ಕ್ಷೇತ್ರದಲ್ಲಿ ನೆರವಿನ ಹಸ್ತ ಚಾಚುವ ರಾಜಕೇಸರಿ ಸಂಘಟನೆ,  ಕಲಾ ಕ್ಷೇತ್ರದಲ್ಲಿ ಸುಂದರ ಬಂಗಾಡಿ, ಸಮಾಜ ಸೇವಾ ಕ್ಷೇತ್ರದಲ್ಲಿ ಸ್ನೇಕ್ ಜೋಯ್ ಹಾಗೂ ಜನಾರ್ದನ ಪೂಜಾರಿ, ಶಿಕ್ಷಣ ಕ್ಷೇತ್ರದಲ್ಲಿ ಡಾ. ಮಹೇಶ್ ಕುಮಾರ್ ಶೆಟ್ಟಿ, ಜಾನಪದ ಕ್ಷೇತ್ರದಲ್ಲಿ ಹಳ್ಳಿ ಮನೆ ಹೈದರ್ ಮತ್ತು ಸುರೇಶ್ ಪರವ ಹಾಗೂ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ನಾರಾವಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯೂ ಪ್ರಶಸ್ತಿಗೆ ಪಾತ್ರವಾಗಿರುವುದು ಹೆಮ್ಮೆಯ ವಿಚಾರ. ಪ್ರಶಸ್ತಿಗೆ ಪಾತ್ರವಾದ ಎಲ್ಲರಿಗೂ ಅಭಿನಂದನೆಗಳು ಎಂದು ದ.ಕ. ಜಿಲ್ಲಾ ಕೆ.ಡಿ.ಪಿ. ಸದಸ್ಯ ಸಂತೋಷ್ ಕುಮಾರ್ ಲಾಯಿಲಾ ಹರ್ಷ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!