ಬೆಳ್ತಂಗಡಿ : ಬಳ್ಳಮಂಜ- ಪಣಕಜೆ ರಸ್ತೆಯ ಪಾಲ್ಯರ ಬಳಿ ಪಿಕಪ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸವಾರರು ಮೃತಪಟ್ಟ ಘಟನೆ ಜೂನ್.8 ರಂದು ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಎಸ್ಎಂ ಶಾಮಿಯಾನದ ಪಿಕಪ್ ವಾಹನ ಬಳ್ಳಮಂಜದಿಂದ ಪಣಕಜೆ ಕಡೆಗೆ ತೆರಳುತ್ತಿದ್ದಾಗ ಪಣಕಜೆಯಿಂದ ಬಳ್ಳಮಂಜ ಕಡೆಗೆ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ದ್ವಿಚಕ್ರ ಸಹಸವಾರ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಹೇಂಟ್ರೇಲು ನಿವಾಸಿ ಚಂದಪ್ಪ ಮೂಲ್ಯ(65) ಎಂಬವರಿಗೆ ಬಲವಾದ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಕುತ್ತಿನ ನಿವಾಸಿ ಡಾಕಯ್ಯ ಗೌಡ(60) ಎಂಬವರಿಗೆ ತಲೆಗೆ ತೀವ್ರಗಾಯ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸುವ ಮೇಲೆ ಮೃತಪಟ್ಟಿದ್ದಾರೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ


