Friday, June 5, 2026
Homeಅಪರಾಧಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ಸಿಮೆಂಟ್ ಜಿಂಕೆ ಬಿದ್ದು ಮಗು ಮೃತ್ಯು

ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ಸಿಮೆಂಟ್ ಜಿಂಕೆ ಬಿದ್ದು ಮಗು ಮೃತ್ಯು

- Advertisement -
- Advertisement -

ಶಿವಮೊಗ್ಗ: ಇಲ್ಲಿನ ಮುದ್ದಿನಕೊಪ್ಪದಲ್ಲಿರುವ ಟೀ ಪಾರ್ಕ್ ನಲ್ಲಿ ಆಟವಾಡಲೆಂದು ಸಿಮೆಂಟ್ ಜಿಂಕೆ ಮೇಲೆ ಏರಿದ್ದ ಆರು ವರ್ಷ ಮಗುವೊಂದು, ಜಿಂಕೆ ಪ್ರತಿಮೆ ಮುರಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತಪಟ್ಟ ಬಾಲಕಿ ಶಿವಮೊಗ್ಗ ನಗರದ ಹರೀಶ್, ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ ಎಂದು ಗುರುತಿಸಲಾಗಿದೆ.

ಕುಟುಂಬಸ್ಥರು ಭಾನುವಾರದಂದು ಮಕ್ಕಳನ್ನು ಆಟವಾಡಿಸಲು ಟೀ ಪಾರ್ಕ್‌ಗೆ ತೆರಳಿದ್ದರು. ಈ ವೇಳೆ ಸಿಮೆಂಟ್ ಜಿಂಕೆ ಮೇಲೆ ಮಗು ಕುಳಿತುಕೊಂಡಿದ್ದು, ಭಾರ ತಾಳದೇ ಸಿಮೆಂಟ್ ಜಿಂಕೆ ಮುರಿದು ಬಿದ್ದು, ಅವಘಡ ಸಂಭವಿಸಿದೆ.

ಘಟನೆಯ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!