Wednesday, June 24, 2026
Homeಅಪರಾಧಬೆಳ್ತಂಗಡಿ : ವೇಣೂರು ಪಟಾಕಿ ದುರಂತ ಪ್ರಕರಣ, ಇಬ್ಬರು ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

ಬೆಳ್ತಂಗಡಿ : ವೇಣೂರು ಪಟಾಕಿ ದುರಂತ ಪ್ರಕರಣ, ಇಬ್ಬರು ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

- Advertisement -
- Advertisement -

ಬೆಳ್ತಂಗಡಿ : ವೇಣೂರು ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜ.30 ರಂದು(ಇಂದು) ಬೆಳ್ತಂಗಡಿ ಕೋರ್ಟ್ ಗೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಹಾಜರುಪಡಿಸಿದ್ದು ಇಬ್ಬರು ಆರೋಪಿಗಳಿಗಳನ್ನು 7 ದಿನ ಪೊಲೀಸ್ ಕಸ್ಟಡಿ ನೀಡಿ ಬೆಳ್ತಂಗಡಿ ಕೋರ್ಟ್ ಆದೇಶ ಹೊರಡಿಸಿದೆ.

ವೇಣೂರು ನಿವಾಸಿ ಸೈಯದ್ ಬಶೀರ್(47) ಮತ್ತು ಹಾಸನದ ಕಿರಣ್ (24) ಎಂಬುವರನ್ನು ಜ.28 ರಂದು ರಾತ್ರಿ ಪರಾರಿಯಾಗುತ್ತಿದ್ದಾಗ ಸುಳ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ಜ.29 ರಂದು ರಾತ್ರಿ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರು. ನಂತರ ನ್ಯಾಯಾಂಗ ಬಂಧನ ವಿಧಿಸಿ ಜ.30 ರಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಲು ಆದೇಶ ಮಾಡಿದ್ದು. ಅದರಂತೆ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಆರೋಪಿಗಳಿಬ್ಬರನ್ನು ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಲ ದಂಡಾಧಿಕಾರಿಗಳ ಕೋರ್ಟ್ ನ ನ್ಯಾಯಧೀಶರಾದ ವಿಜಯೇಂದ್ರ ಮುಂದೆ ಹಾಜರುಪಡಿಸಿದರು.

ಈ ವೇಳೆ ಪೊಲೀಸರ ಪರ ವಕೀಲರು ಘಟನೆಯ ಹೆಚ್ಚಿನ ವಿಚಾರಣೆಗೆ ಹತ್ತು ದಿನ ಪೊಲೀಸ್ ಕಸ್ಟಡಿ ಕೇಳಿದ್ದರು. ನಂತರ ಆರೋಪಿ ಪರ ವಕೀಲರಾದ ಅರುಣ್ ಬಂಗೇರ ಹತ್ತು ದಿನ ಅಗತ್ಯ ಇಲ್ಲ, ಅನುಮತಿ ಇದ್ದು ಪಟಾಕಿ ಕಾರ್ಖಾನೆ ನಡೆಸುತ್ತಿದ್ದು. ಪಟಾಕಿ ಸಣ್ಣ ಇರಲಿ ದೊಡ್ಡ ಇರಲಿ ಸ್ಫೋಟವಾದರೆ ಗಾಯವಾಗುತ್ತದೆ ಎಂದು ವಾದಿಸಿದರು. ನಂತರ ನ್ಯಾಯಧೀಶರು ಆರು ದಿನಗಳ ಕಾಲ ಫೆ.5 ರ ವರೆಗೆ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಮಾಡಿದರು.

- Advertisement -

Latest News

error: Content is protected !!