Wednesday, May 15, 2024
Homeಅಪರಾಧಕೋಳಿ ಅಂಕ ಜೂಜಾಟಕ್ಕೆ ಪೊಲೀಸ್ ಠಾಣೆಯಿಂದ ಅನುಮತಿಯಿಲ್ಲ; ಅನುಮತಿಗಾಗಿ ಪೊಲೀಸ್‌ ಠಾಣೆಗಳಿಗೆ ಬರಬೇಡಿ: ದ.ಕ ಎಸ್.ಪಿ...

ಕೋಳಿ ಅಂಕ ಜೂಜಾಟಕ್ಕೆ ಪೊಲೀಸ್ ಠಾಣೆಯಿಂದ ಅನುಮತಿಯಿಲ್ಲ; ಅನುಮತಿಗಾಗಿ ಪೊಲೀಸ್‌ ಠಾಣೆಗಳಿಗೆ ಬರಬೇಡಿ: ದ.ಕ ಎಸ್.ಪಿ ಸೂಚನೆ

spot_img
- Advertisement -
- Advertisement -

ಬಂಟ್ವಾಳ: ಕಾನೂನುಬಾಹಿರ ಅಪರಾಧವಾಗಿರುವ ಜೂಜಿನ ಕೋಳಿ ಅಂಕವನ್ನು ನಡೆಸುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಈ ಕುರಿತಂತೆ ಸಾರ್ವಜನಿಕರು ಕೋಳಿ ಅಂಕವನ್ನು ನಡೆಸಲು ಅನುಮತಿಗಾಗಿ ಪೊಲೀಸ್‌ ಠಾಣೆಗಳಿಗೆ ಮನವಿ ಸಲ್ಲಿಸಬಾರದು. ಕೋಳಿಅಂಕದಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ, ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆಯನ್ನು ನೀಡಿದ್ದಾರೆ.

- Advertisement -
spot_img

Latest News

error: Content is protected !!