- Advertisement -
- Advertisement -
ನವದೆಹಲಿ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿಯಲ್ಲೂ ‘ಸಿಡಿ ಫ್ಯಾಕ್ಟರಿ’ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿದ್ದು, ಒಂದರ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇನ್ನೊಂದು ಫ್ಯಾಕ್ಟರಿ ಬಿಜೆಪಿಯಲ್ಲೇ ಸಕ್ರಿಯವಾಗಿದೆ. ಭವಿಷ್ಯದಲ್ಲಿ ತಮಗೆ ಎದುರಾಳಿಯಾಗಬಹುದಾದ ಸ್ವಪಕ್ಷದವರನ್ನೇ ಬ್ಲ್ಯಾಕ್‌ಮೇಲ್ ಮಾಡಲು ಮತ್ತು ಹಣ ದೋಚಲು ಕೆಲವು ಉದಯೋನ್ಮುಖ ರಾಜಕಾರಣಿಗಳು ಸ್ಟಿಂಗ್ ಆಪರೇಷನ್ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಈ ಕೆಟ್ಟ ಚಾಳಿ ಮುಂದುವರಿದಿದ್ದು, ಜನಪ್ರತಿನಿಧಿಗಳ ಇಮೇಜ್ ಹಾಳುಮಾಡುವ ತಂಡಗಳು ಬೆಂಗಳೂರಿನಲ್ಲಿ ಸಕ್ರಿಯವಾಗಿವೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
- Advertisement -


