Sunday, October 25, 2026
Homeಕರಾವಳಿಮಂಗಳೂರುಸುಳ್ಯ: ಗೂನಡ್ಕದಲ್ಲಿ ಲಾರಿ-ಕಾರು ಭೀಕರ ಅಪಘಾತ; 10 ವರ್ಷದ ಬಾಲಕ ದುರ್ಮರಣ

ಸುಳ್ಯ: ಗೂನಡ್ಕದಲ್ಲಿ ಲಾರಿ-ಕಾರು ಭೀಕರ ಅಪಘಾತ; 10 ವರ್ಷದ ಬಾಲಕ ದುರ್ಮರಣ

- Advertisement -
- Advertisement -

ಸುಳ್ಯ: ಮಾಣಿ–ಮೈಸೂರು ರಾಜ್ಯ ಹೆದ್ದಾರಿಯ ಗೂನಡ್ಕ ಶಾಲೆಯ ಬಳಿ ಭಾನುವಾರ (ಅ.25) ಮುಂಜಾನೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ವರ್ಷದ ಬಾಲಕನೋರ್ವ ಸ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತನುಷ್ (10) ಮೃತಪಟ್ಟ ಬಾಲಕ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ತೀವ್ರ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ಹಾಗೂ ಮತ್ತೊಂದು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಮಡಿಕೇರಿ ಕಡೆಯಿಂದ ಸುಳ್ಯದತ್ತ ಸಾಗುತ್ತಿದ್ದ ಹತ್ತು ಚಕ್ರದಲಾರಿಗೆ, ನಿಯಂತ್ರಣ ತಪ್ಪಿದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ತೀವ್ರವಾಗಿ ಜಖಂಗೊಂಡಿದೆ.ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!