Friday, May 17, 2024
Homeಇತರತಳ್ಳಮಟ್ಟದ ಕಾರ್ಯಕರ್ತರಿಗೆ ಹೊಸ ಚೈತನ್ಯ ಮೂಡಿಸಿದ ಶಾಂತರಾಮ್ ಸಿದ್ದಿ ಆಯ್ಕೆ

ತಳ್ಳಮಟ್ಟದ ಕಾರ್ಯಕರ್ತರಿಗೆ ಹೊಸ ಚೈತನ್ಯ ಮೂಡಿಸಿದ ಶಾಂತರಾಮ್ ಸಿದ್ದಿ ಆಯ್ಕೆ

spot_img
- Advertisement -
- Advertisement -

ಉತ್ತರಕನ್ನಡ : ವಿಧಾನಪರಿಷತ್ ಸದಸ್ಯರಾಗಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ದಿ ಅವರು ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಜನರೇ ಆಶ್ಚರ್ಯ ಪಡುವಂತಾಗಿದೆ. ತಳಮಟ್ಟದ ಕಾರ್ಯಕರ್ತನೊಬ್ಬನಿಗೆ ಇಂತಹ ಅವಕಾಶ ಲಭಿಸಿರೋದು ತಳಮಟ್ಟದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಆ ಮೂಲಕ ತಳಮಟ್ಟದ ಕಾರ್ಯಕರ್ತರ ಸೇವೆಗಳನ್ನೂ ಬಿಜೆಪಿ ಗಮನಿಸುತ್ತಿದೆ ಎನ್ನುವುದನ್ನು ಸಾಬೀತು ಪಡಿಸಿದೆ.

ಅಂದ್ಹಾಗೆ ಶಾಂತಾರಾಮ ಬುದ್ನಾ ಸಿದ್ದಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ ಇವರ ಬಗ್ಗೆ ಜನ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಂದ್ಹಾಗೆ ಶಾಂತಾರಾಮ್ ಅವರಿಗೆ ಇದು ನಿರೀಕ್ಷೆ ಮಾಡಿ ಒಲಿದ ಅವಕಾಶವಲ್ಲ. ಅದೆಷ್ಟೋ ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಯಾವುದೇ ಪ್ರತಿಫಲಾಪೇಕ್ಷೆ ಮಾಡದ ಅವರು ಸದ್ದಿಲ್ಲದೆ ಮಾಡಿದ ಸೇವೆಗೆ ಸಂದ ಗೌರವ.

ಅಂದ್ಹಾಗೆ ಶಾಂತರಾಮ ಸಿದ್ದಿ ಅವರದ್ದು ಅದೊಂದು ಆದರ್ಶ ಬದುಕು. ಅವರು ಸಿದ್ದಿ ಜನಾಂಗದ ಮೊದಲ ಪದವೀಧರ .ಅತ್ಯಂತ ಕಡು ಬಡವ.  ತನ್ನ ಜೀವನವನ್ನು ವನವಾಸಿಗಳ ಬದುಕನ್ನು ಹಸನು ಮಾಡಲು ಮುಡಿಪಾಗಿಟ್ಟವರು. ಇಂತಹ ಅಪ್ಪಟ ಶ್ರಮಿಕನನ್ನು ಬಿಜೆಪಿ  ಗುರುತಿಸಿ ಮೇಲ್ಮನೆಗೆ ಕಳುಹಿಸಿರುವುದು ಭಾರತೀಯ ರಾಜಕೀಯದಲ್ಲಿ ಒಂದು ಐತಿಹಾಸಿಕ ನಿರ್ಣಯ.

ಶಾಂತಾರಾಮ ಸಿದ್ದಿ ಅವರದ್ದು  ಚಿಪಗೇರಿ ಶಿರಸಿ-  ಯಲ್ಲಾಪುರ ರಸ್ತೆ ಮಧ್ಯೆ ಸಿಗುವ ಉಮ್ಮಚಿಗೆಯಿಂದ 14 ಕಿಲೋಮೀಟರ್ ದೂರದಲ್ಲಿರುವ ಒಂದು ಗ್ರಾಮ. ಆ ಗ್ರಾಮ ವನವಾಸಿ ಜನಾಂಗದ ಸಿದ್ದಿ, ದನಗರಗೌಳಿ ಜನಾಂಗವೇ ಹೆಚ್ಚು ವಾಸ ಮಾಡುತ್ತಿರುವ ಅರಣ್ಯ ಪ್ರದೇಶದಿಂದ ಕೂಡಿದ ಸುಂದರ  ಪ್ರದೇಶ . ಶಿರಸಿ ವಿಭಾಗ ಪ್ರಚಾರಕರಾಗಿದ್ದ  ಪ್ರಕಾಶ್  ಅವರ ಆಶಯದಂತೆ ಶಾಂತಾರಾಮ ಸಿದ್ದಿಯವರು ಒಂದು ಪುಟ್ಟ ಗುಡಿಸಲು ಕಟ್ಟಿ ಅಲ್ಲಿ ವನವಾಸಿ ವಿದ್ಯಾರ್ಥಿ ನಿಲಯ ಪ್ರಾರಂಭಿಸಿದರು. ವಿಶೇಷವಾಗಿ ಸಿದ್ದಿ ಜನಾಂಗವನ್ನೇ ಕಣ್ಣ ಮುಂದೆ ಇಟ್ಟುಕೊಂಡು ಈ ಪ್ರಕಲ್ಪ ಆರಂಭಿಸಲಾಗಿತ್ತು. ಶಾಂತಾರಾಮ ಸಿದ್ದಿಯವರೇ ಇಲ್ಲಿ ಪಾಠ ಮಾಡುವುದು,  ಊಟ ತಯಾರಿಸುವುದು, ಗುಡಿಸಿ, ಸಾರಿಸುವುದು ಎಲ್ಲವನ್ನೂ ಮಾಡುತ್ತಿದ್ದರು.

ಹೀಗೆ ಆರಂಭವಾದ ಅವರ ಸಂಘಟನಾ ಕೆಲಸ ಕರ್ನಾಟಕದಲ್ಲಿ ವನವಾಸಿ ಕಲ್ಯಾಣಾಶ್ರಮವಾಗಿ ಬೆಳೆದಿದೆ. ಇನ್ನೂ ಬೆಳೆಯುತ್ತಿದೆ. ವನವಾಸಿ ಸಮುದಾಯದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ಇದ್ದು ಓದಿ ಸಮಾಜದಲ್ಲಿ ತಾವೇನೂ ಕಡಿಮೆ ಇಲ್ಲ ಎಂಬಂತೆ ಬದುಕುತ್ತಿದ್ದಾರೆ.. ಅವೆಲ್ಲಕ್ಕೂ ಶಾಂತರಾಮ ಸಿದ್ದಿಯವರ ಪ್ರೇರಣೆ, ಮಾರ್ಗದರ್ಶನ ಇದ್ದೇ ಇದೆ .

ಶಾಂತರಾಮ ಇದೀಗ ವಿಧಾನಪರಿಷತ್ತಿಗೆ ನಾಮನಿರ್ದೇಶನ ಹೊಂದಿದ್ದಾರೆ.  ಈ ಹಿಂದೆ ಅನಂತ ಹೆಗಡೆ ಅಶೀಸರ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿದ್ದಾಗ ಆ ಕಾರ್ಯಪಡೆಯ ಸದಸ್ಯರಾಗಿ ಕೆಲಸ ಮಾಡಿದ್ದರು ಶಾಂತರಾಮ್. ಇದಲ್ಲದೆ ಅನೇಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಜೋಡಿಸಿಕೊಂಡಿದ್ದಾರೆ. ವಿಶೇಷವಾಗಿ ವನವಾಸಿ ಕ್ಷೇತ್ರದಲ್ಲಿ ಆಗುತ್ತಿರುವ ಮತಾಂತರದ ವಿರುದ್ಧ ಅವರ ನಿರಂತರ ಹೋರಾಟ ಸದಾ ಸ್ಮರಣೀಯ. ಇದೀಗ  ಹೊಸ ಸವಾಲಿಗೆ ಮುಖ ಮಾಡಿದ್ದಾರೆ ಶಾಂತಾರಾಮ್.

ಹಾಗೆ ನೋಡಿದರೆ  ಉತ್ತರ ಭಾರತದಲ್ಲಿ ಹಲವು ಮಂದಿ ವನವಾಸಿ ಜನಾಂಗದವರು ಕೇಂದ್ರ ಮಂತ್ರಿ, ಮುಖ್ಯಮಂತ್ರಿ, ಸಂಸದರು, ಶಾಸಕರು ಆಗಿದ್ದಾರೆ. ರಾಜ್ಯ  ವಿಧಾನಸಭೆಯ ಮೀಸಲು ಕ್ಷೇತ್ರಗಳಲ್ಲಿ ಗೆದ್ದು ಬಂದವರು ಹಲವು ಮಂದಿ ಇದ್ದಾರೆ. ಆದರೆ ಇದು ಅತ್ಯಂತ ಶ್ರೇಷ್ಠ ಗೌರವ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ, ಒಂದು ದೊಡ್ಡ ಸ್ಥಾನ ನೀಡಿದ ಬಿಜೆಪಿ ಸಾಮಾನ್ಯ ಕಾರ್ಯಕರ್ತರು ಮಾಡುತ್ತಿರುವ ಕೆಲಸದ ಬಗ್ಗೆ ನಮಗೆ ಅರಿವಿದೆ ಎಂಬುವುದನ್ನು ತೋರಿಸಿದೆ.

- Advertisement -
spot_img

Latest News

error: Content is protected !!