Sunday, May 5, 2024
Homeತಾಜಾ ಸುದ್ದಿದ್ವಿತೀಯ ಪಿಯು ವಿದ್ಯಾರ್ಥಿಗಳ ಗಮನಕ್ಕೆ‌: ಇಂದಿನಿಂದ ಆನ್​ಲೈನ್ ಕ್ಲಾಸ್ ಶುರು..!

ದ್ವಿತೀಯ ಪಿಯು ವಿದ್ಯಾರ್ಥಿಗಳ ಗಮನಕ್ಕೆ‌: ಇಂದಿನಿಂದ ಆನ್​ಲೈನ್ ಕ್ಲಾಸ್ ಶುರು..!

spot_img
- Advertisement -
- Advertisement -

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪದವಿ ಪೂರ್ವಶಿಕ್ಷಣ ಇಲಾಖೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಇಂದಿನಿಂದ ಯುಟ್ಯೂಬ್ ನಲ್ಲಿ ಲೈವ್ ವಿಡಿಯೋಗಳ ಬೋಧನೆ ಆರಂಭಿಸಲು ಮುಂದಾಗಿದೆ.

ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿದಿನ 45 ನಿಮಿಷಗಳ 4 ತರಗತಿಗಳನ್ನು ನಡೆಸಲು ಚಿಂತಿಸಲಾಗಿದ್ದು, ಪ್ರತಿದಿನ ಬೆಳಗ್ಗೆ 9 ರಿಂದ 12 ಗಂಟೆವರೆಗೆ ಪಾಠಗಳನ್ನು ಬೋಧಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

https://www.youtube.com/c/dpuedkpucpa ಈ ಯುಟ್ಯೂಬ್‌ ಲಿಂಕ್‌ ಬಳಸಿ, ವೇಳಾಪಟ್ಟಿಯ ಸಮಯದಲ್ಲಿ ಇಲ್ಲವೇ ಬೇರೆ ದಿನಗಳಲ್ಲಿಯೂ ಪುನರಾವರ್ತಿತವಾಗಿ ವೀಕ್ಷಿಸಬಹುದು.

ದ್ವಿತೀಯ ಪಿಯು ಯೂಟ್ಯೂಬ್ ತರಗತಿಯ ವೇಳಾಪಟ್ಟಿ ಇಂತಿದೆ.

  • ಜುಲೈ 23: ಭೌತಶಾಸ್ತ್ರ / ಅಕೌಂಟೆನ್ಸಿ ಭೌತಶಾಸ್ತ್ರ / ಅಕೌಂಟೆನ್ಸಿ (ನೋಟ್ಸ್‌) ರಸಾಯನಶಾಸ್ತ್ರ / ರಾಜ್ಯಶಾಸ್ತ್ರ ರಸಾಯನಶಾಸ್ತ್ರ / ರಾಜ್ಯಶಾಸ್ತ್ರ (ನೋಟ್ಸ್‌)
  • ಜುಲೈ 24: ಜೀವಶಾಸ್ತ್ರ / ಬಿಸಿನೆಸ್‌ ಸ್ಟಡೀಸ್‌ ಜೀವಶಾಸ್ತ್ರ / ಬಿಸಿನೆಸ್‌ ಸ್ಟಡೀಸ್‌ (ನೋಟ್ಸ್‌) ಗಣಿತ / ಅರ್ಥಶಾಸ್ತ್ರ ಗಣಿತ / ಅರ್ಥಶಾಸ್ತ್ರ (ನೋಟ್ಸ್‌)
  • ಜುಲೈ 25: ಗಣಿತ /ಇತಿಹಾಸ ಗಣಿತ/ಇತಿಹಾಸ (ನೋಟ್ಸ್‌) ಜೀವಶಾಸ್ತ್ರ/ ಬಿಸಿನೆಟ್‌ ಸ್ಟಡೀಸ್‌ ನೋಟ್ಸ್‌
  • ಜುಲೈ 27: ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್‌ ಕಂಪ್ಯೂಟರ್‌ ಸೈನ್ಸ್‌/ ಸಮಾಜಶಾಸ್ತ್ರ ನೋಟ್ಸ್‌
  • ಜುಲೈ 28: ಬೇಸಿಕ್‌ ಮ್ಯಾಥ್ಸ್/ ಸಮಾಜಶಾಸ್ತ್ರ ನೋಟ್ಸ್‌ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್‌
  • ಜುಲೈ 29: ಇಂಗ್ಲಿಷ್‌ ನೋಟ್ಸ್‌ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್‌
  • ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್‌ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್‌
  • ಜುಲೈ 31: ಜೀವಶಾಸ್ತ್ರ/ಬಿಸಿನೆಸ್‌ ಸ್ಟಡೀಸ್‌ ನೋಟ್ಸ್‌ ಗಣಿತ/ಅರ್ಥಶಾಸ್ತ್ರ ನೋಟ್ಸ್‌
  • ಆಗಸ್ಟ್‌ 1: ಗಣಿತ/ಇತಿಹಾಸ ನೋಟ್ಸ್‌ ಜೀವಶಾಸ್ತ್ರ/ ಬಿಸಿನೆಟ್‌ ಸ್ಟಡೀಸ್‌ ನೋಟ್ಸ್‌

ಒಂದನೇ ಅವಧಿಯಲ್ಲಿ ವಿಡಿಯೊ ತರಗತಿ, ಎರಡನೇ ಅವಧಿಯಲ್ಲಿ ಈ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್‌, ಬರವಣಿಗೆ ಇರಲಿದೆ. ಆಯಾ ಕಾಲೇಜಿನ, ಆಯಾ ವಿಷಯಗಳ ಉಪನ್ಯಾಸಕರು ಈ ಬಗ್ಗೆ ನಿಗಾ ವಹಿಸಬೇಕು. ಜಿಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರ ಹೆಗಲಿಗೆ ಜವಾಬ್ದಾರಿ ನೀಡಲಾಗಿದೆ. ಇವರ ಮೂಲಕ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲು‍ಪಿಸಿ ಪ್ರತಿ ದಿನ ತರಗತಿಗಳನ್ನು ವೀಕ್ಷಿಸಲು ಪ್ರೇರೇಪಿಸಬೇಕು. ಆಯಾ ಪಾಠಕ್ಕೆ ಸಂಬಂಧಿಸಿದ ನೋಟ್ಸ್‌ಗಳು ಅದೇ ದಿನ ಲಭ್ಯವಾಗಲಿವೆ ಎಂದು ಪಿಯು ಮಂಡಳಿ ಸೂಚಿಸಿದೆ‌.

ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಇಂಟರ್ ನೆಟ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಬೇಡ. ಕಾಲೇಜು ಆರಂಭವಾದ ಮೇಲೆ ಮತ್ತೊಮ್ಮೆ ಪಾಠಗಳನ್ನು ಬೋಧಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!