Thursday, June 4, 2026
Homeಕರಾವಳಿಮಂಗಳೂರುಎಸ್ ಐಟಿ ಮುಂದೆ ಹಾಜರಾಗಲು ದುಬೈನಿಂದ ಬರುತ್ತಿರುವ ಪ್ರಜ್ವಲ್ ರೇವಣ್ಣ; ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ...

ಎಸ್ ಐಟಿ ಮುಂದೆ ಹಾಜರಾಗಲು ದುಬೈನಿಂದ ಬರುತ್ತಿರುವ ಪ್ರಜ್ವಲ್ ರೇವಣ್ಣ; ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆ

- Advertisement -
- Advertisement -

ಮಂಗಳೂರು; ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐಟಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ಅವರು ಎಸ್ ಐಟಿ ಮುಂದೆ ಹಾಜರಾಗಲು ಅವರ ಕುಟುಂಬದಿಂದಲೂ ಒತ್ತಡ ಹೆಚ್ಚುತ್ತಿದೆ ಎನ್ನಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ದುಬೈ ನಿಂದ ಪ್ರಜ್ವಲ್ ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಅಬುಧಾಬಿಯಿಂದ ಬೆಳಗ್ಗೆ 6:24ಕ್ಕೆ ಆಗಮಿಸಿದ ವಿಮಾನಲ್ಲಿ ಪ್ರಜ್ವಲ್‌ ಬಂದಿಲ್ಲ. ದುಬೈನಿಂದ ಆಗಮಿಸುವ 2ನೇ ವಿಮಾನ ಬೆಳಗ್ಗೆ 7:55ಕ್ಕೆ ಲ್ಯಾಂಡ್‌ ಆಗಲಿದೆ. ದುಬೈನಿಂದ ಸಂಜೆ 6:15ಕ್ಕೆ ಮತ್ತೊಂದು ವಿಮಾನ ಬರಲಿದೆ. ಕುವೈಟ್‌ನಿಂದ 6:40ಕ್ಕೆ ವಿಮಾನ ಬರಲಿದೆ. ಈ ವಿಮಾನಗಳ ಪೈಕಿ ಒಂದು ವಿಮಾನದಲ್ಲಿ ಪ್ರಜ್ವಲ್‌ ಬರಬಹುದು ಎನ್ನಲಾಗಿದೆ.

- Advertisement -

Latest News

error: Content is protected !!