Sunday, April 28, 2024
Homeಕ್ರೀಡೆನಿನ್ನೆಯ ಪಂದ್ಯದಲ್ಲಿ ಬಾಲ್ ಗೆ ಎಂಜಲು ಹಚ್ಚಿ ಕೊರೊನಾ ನಿಯಮ ಉಲ್ಲಂಘಿಸಿದ ರಾಬಿನ್ ಉತ್ತಪ್ಪ

ನಿನ್ನೆಯ ಪಂದ್ಯದಲ್ಲಿ ಬಾಲ್ ಗೆ ಎಂಜಲು ಹಚ್ಚಿ ಕೊರೊನಾ ನಿಯಮ ಉಲ್ಲಂಘಿಸಿದ ರಾಬಿನ್ ಉತ್ತಪ್ಪ

spot_img
- Advertisement -
- Advertisement -

ಅಬುಧಾಬಿ: ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಅವರು ಆಚಾನಕ್ ಆಗಿ ಬಾಲಿಗೆ ಎಂಜಲು ಹಚ್ಚಿ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಕೊರೊನಾ ಕಾರಣದಿಂದ 6 ತಿಂಗಳ ತಡವಾಗಿ ಐಪಿಎಲ್ ಯುಎಇಯಲ್ಲಿ ಆರಂಭವಾಗಿದೆ. ಇಡೀ ವಿಶ್ವದಲ್ಲೇ ಕೊರೊನಾ ಇರುವ ಕಾರಣದಿಂದ ಬಿಸಿಸಿಐ ಕೆಲ ಹೊಸ ಕೊರೊನಾ ನಿಯಮಗಳನ್ನು ರಚಿಸಿಕೊಂಡು ಐಪಿಎಲ್ ಆಡಿಸುತ್ತಿದೆ. ಈ ನಿಯಮಗಳ ಪ್ರಕಾರ ಬಾಲಿಗೆ ಎಂಜಲು ಹಚ್ಚುವುದನ್ನು ನಿಷೇಧ ಮಾಡಿದೆ.


ಟಾಸ್ ಸೋತ ಕೋಲ್ಕತ್ತಾ ತಂಡ ಮೊದಲು ಬ್ಯಾಟಿಂಗ್ ಬಂದಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಜಯದೇವ್ ಉನಾದ್ಕಟ್ ಅವರು ಇನ್ನಿಂಗ್ಸ್‍ನ ಮೂರನೇ ಓವರ್ ಬೌಲ್ ಮಾಡುತ್ತಿದ್ದರು. ಆಗ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ ಮ್ಯಾನ್ ಸುನಿಲ್ ನರೈನ್ ಅವರು ದೊಡ್ಡ ಹೊಡೆತಕ್ಕೆ ಕೈಹಾಕಿ ಉತ್ತಪ್ಪ ಅವರಿಗೆ ಕ್ಯಾಚ್ ನೀಡಿದರು. ಆದರೆ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ ಉತ್ತಪ್ಪ ಆ ನಂತರ ಬಾಲಿಗೆ ಎಂಜಲು ಹಚ್ಚಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಕೊರೊನಾ ಕಾರಣದಿಂದ ಬಾಲಿಗೆ ಎಂಜಲು ಹಚ್ಚುವುದನ್ನು ಐಪಿಎಲ್ ನಿಷೇಧ ಮಾಡಿದೆ. ಈ ನಿಯಮ ಐಸಿಸಿ ಕೂಡ ಜಾರಿಗೆ ತಂದಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲೂ ಬ್ಯಾನ್ ಮಾಡಲಾಗಿದೆ. ಜೊತೆಗೆ ಒಂದು ವೇಳೆ ಬಾಲಿಗೆ ಯಾವುದೇ ಆಟಗಾರ ಎಂಜಲು ಹಚ್ಚಿದರೆ ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಇದನ್ನೂ ಮೀರಿ ಮೂರನೇ ಬಾರಿ ತಪ್ಪು ಮಾಡಿದರೆ ಎದರುರಾಳಿ ತಂಡಕ್ಕೆ ಬೌಲಿಂಗ್ ಮಾಡುತ್ತಿದ್ದ ತಂಡ ಐದು ರನ್‍ಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಐಸಿಸಿ ನಿಯಮ ಮಾಡಿದೆ.

- Advertisement -
spot_img

Latest News

error: Content is protected !!