Saturday, June 6, 2026
Homeಕ್ರೀಡೆRCB Vs CSK ನಡುವಿನ ಮೊದಲ ಪಂದ್ಯಕ್ಕೆ ದಾಖಲೆಯ ವೀಕ್ಷಕರು

RCB Vs CSK ನಡುವಿನ ಮೊದಲ ಪಂದ್ಯಕ್ಕೆ ದಾಖಲೆಯ ವೀಕ್ಷಕರು

- Advertisement -
- Advertisement -

ಇಂಡಿಯನ್ ಪ್ರಿಮಿಯರ್ ಲೀಗ್‌ (ಐಪಿಎಲ್‌)ನ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯವು 16.8 ಕೋಟಿ ವೀಕ್ಷಕರನ್ನು ಸೆಳೆದಿದೆ ಎಂದು ಟೂರ್ನಿಯ ಆಧಿಕೃತ ಪ್ರಸಾರಕರು ಗುರುವಾರ ಮಾಹಿತಿ ನೀಡಿದ್ದಾರೆ.

ಮಾ.22ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ನಡುವೆ ಮೊದಲ ಪಂದ್ಯ ನಡೆದಿತ್ತು. ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿತ್ತು.

ಮೊದಲ ದಿನ 1276 ಕೋಟಿ ವೀಕ್ಷಕ ಗಂಟೆಗಳು ದಾಖಲಾಗಿದ್ದು, ಇದು ಐಪಿಎಲ್‌ನ ಯಾವುದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ದಾಖಲಾದ ಅತೀ ಹೆಚ್ಚು ಸಮಯ ಎಂದು ಡಿಸ್ನಿ ಸ್ಟಾರ್‌ ಹೇಳಿದೆ.

ಗರಿಷ್ಠ ಟಿವಿ ವೀಕ್ಷಣೆಗೂ ಐಪಿಎಲ್‌ನ 17ನೇ ಋತುವಿನ ಆರಂಭಿಕ ದಿನ ಸಾಕ್ಷಿಯಾಯಿತು. ಡಿಸ್ನಿ ಸ್ಟಾರ್ ನೆಟ್‌ವರ್ಕ್‌ನಲ್ಲಿ 6.1 ಕೋಟಿ ವೀಕ್ಷಕರು ಏಕಕಾಲದಲ್ಲಿ ಪಂದ್ಯದ ಪ್ರಸಾರವನ್ನು ವೀಕ್ಷಿಸಿದರು.

- Advertisement -

Latest News

error: Content is protected !!