Saturday, April 27, 2024
Homeಕರಾವಳಿಬೆಳ್ತಂಗಡಿ : ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

ಬೆಳ್ತಂಗಡಿ : ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

spot_img
- Advertisement -
- Advertisement -

ಬೆಳ್ತಂಗಡಿ : “ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ  ಮೂರು ದಿನಗಳ ಕಾಲ ನಡೆಯಲಿರುವ ಬೇಸಿಗೆ ಶಿಬಿರವನ್ನು  ಬೆಳ್ತಂಗಡಿ ತಾಲೂಕಿನ ವಿಜಯವಾಣಿ ಪತ್ರಿಕೆಯ ವರದಿಗಾರ ಮನೋಹರ್ ಬಳಂಜ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, “ಶಿಕ್ಷಣದೊಂದಿಗೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಪ್ರತಿಭಾನ್ವಿತರಾಗಲು ಸಾದ್ಯ. ಶಿಕ್ಷಣ ಸಂಸ್ಥೆಗಳು ಬೆಸಿಗೆ ಶಿಬಿರ ಅಯೋಜಿಸಿದರೆ ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.ಇಂದು ಉಜಿರೆ ಎಸ್ ಡಿ ಎಂ ಆಂಗ್ಲಮಾದ್ಯಮ ( ಸಿ,ಬಿ,ಎಸ್,  ಇ) ಶಾಲೆಯಲ್ಲಿ ಮೂರು ದಿನದ ಬೇಸಿಗೆ   ಶಿಬಿರ ಹಮ್ಮಿಕೊಂಡಿರುವುದು ಇಲ್ಲಿನ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವುದರೊಂದಿಗೆ   ಪರಿಸರ ಪ್ರಜ್ನೆ ಬೆಳೆಸಲು ಸಹಕಾರಿಯಾಗಿದೆ ಎಂದರು.

ಮಕ್ಕಳು ಈ ಶಿಬಿರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಜ್ಞಾನ ಸಂಪಾದನೆ ಮಾಡಬೇಕು.ಇಲ್ಲಿ ವಿವಿದ ಕಲಾಕೃತಿಗಳ ತರಬೇತಿಯೊಂದಿಗೆ ಪರಿಸರ ಪ್ರಜ್ನೆ, ಕೈತೋಟ ನಿರ್ಮಾಣ, ಜೀವ ಸಂಕುಲಗಳ ರಕ್ಷಣೆ, ಹೂ ,ಹಣ್ಣು ,ತರಕಾರಿ ಗಳನ್ನು ಬೆಳೆಸುವ ಮಾಹಿತಿಯೊಂದಿಗೆ ಜೀವನ ಮೌಲ್ಯಗಳನ್ನು ಕಲಿಸುತ್ತಿದ್ದು ಇದೊಂದು ಮಕ್ಕಳಿಗೆ ಸಿಕ್ಕಿದ ಉತ್ತಮ ಅವಕಾಶ. ಇದರಲ್ಲಿ ಇಲ್ಲಿನ ಶಿಕ್ಷಕರೇ ತಮ್ಮಲ್ಲಿರುವ ಕಲೆಗಳನ್ನು ಮಕ್ಕಳಿಗೆ ಕಲಿಸುತ್ತಿದ್ದು ಇದರಿಂದ ಶಿಕ್ಷಕರ ಮತ್ತು ಮಕ್ಕಳ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ.ಮಕ್ಕಳ ಭವಿಷ್ಯ ರೂಪಿಸಲು ಈ ಬೇಸಿಗೆ ಶಿಬಿರ ಸಹಕಾರಿಯಾಗಲಿ ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯಕ್ ಕೆ.ಜಿ ವಹಿಸಿ ಮಾತನಾಡಿ  ಪರೀಕ್ಷೆ ಮುಗಿದ ಬಳಿಕ ಮಕ್ಕಳು ತಮ್ಮ ಸಮಯವನ್ನು ಜ್ಞಾನ ಸಂಪಾದನೆಗೆ ಉಪಯೋಗಿಸಿ ಕೊಳ್ಳಬೇಕು ಎಂಬ ಕಲ್ಪನೆಯೊಂದಿಗೆ ಬೇಸಿಗೆ ಶಿಬಿರ ಅಯೋಜಿಸಲಾಗಿದ್ದು ಮೂರು ದಿನಗಳಲ್ಲಿ ವಿವಿಧ ಕಲೆಗಳನ್ನು ಕಲಿಸುವ ಜೊತೆಗೆ , ಕೈತೋಟ ನಿರ್ಮಾಣ, ಸ್ವಚ್ಛ ಪರಿಸರ ಜಾಗ್ರತಿ , ನೀರಿನ ಮಿತ ಬಳಕೆ, ಪ್ರಾಣಿ ಸಂಕುಲಗಳ ಬಗ್ಗೆ ಕಾಳಜಿ ಇನ್ನಿತರ ವಿಷಯಗಳನ್ನು ಕಲಿಸುತ್ತಿದ್ದು ಎಲ್ಲಾ ಶಿಕ್ಷಕರು  ಮಕ್ಕಳೊಂದಿಗೆ ಬೆರೆಯಲಿದ್ದಾರೆ. ಎಸ್ ಡಿ ಮ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದರು.

  ಕಾರ್ಯಕ್ರಮವನ್ನು ಶಿಕ್ಷಕ ಕಿರಣ್ ರಾಜ್ ನಿರೂಪಿಸಿ, ಶಿಕ್ಷಕಿ ಸುಜನ ವಲ್ತಾಜೆ ವಂದಿಸಿದರು.

- Advertisement -
spot_img

Latest News

error: Content is protected !!