Thursday, June 4, 2026
Homeಕರಾವಳಿಬ್ರಹ್ಮಾವರ: ಜೋಕಾಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿ ಆತ್ಮಹತ್ಯೆಗೆ ಶರಣಾದ 7 ನೇ ತರಗತಿಯ ಬಾಲಕ

ಬ್ರಹ್ಮಾವರ: ಜೋಕಾಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿ ಆತ್ಮಹತ್ಯೆಗೆ ಶರಣಾದ 7 ನೇ ತರಗತಿಯ ಬಾಲಕ

- Advertisement -
- Advertisement -

ಬ್ರಹ್ಮಾವರ: ಶಿರಿಯಾರ ಗ್ರಾಮದ ಕಾಜ್ರಳ್ಳಿ ಜನತಾ ಕಾಲೊನಿಯಲ್ಲಿ 7ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಹಳೆಯ ಮನೆಯ ಕೊಠಡಿಯಲ್ಲಿದ್ದ ಜೋಕಾಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿ ಅದೇ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಾಜ್ರಳ್ಳಿ ಜನತಾ ಕಾಲೊನಿ ನಿವಾಸಿ ತನುಷ್(12) ಎಂದು ಮೃತ ಬಾಲಕ. ತನುಷ್‌ ಕಲಿಯುವಿಕೆಯಲ್ಲಿ ಹಿಂದಿದ್ದು, ಪೋಷಕರು ಹೇಳಿದ ಮಾತನ್ನು ಕೇಳದೇ ಹಠಮಾರಿತನದಿಂದ ವರ್ತಿಸುತ್ತಿದ್ದ ಎನ್ನಲಾಗಿದೆ.

ಬೆಳಿಗ್ಗೆ ಸುಮಾರು 9 ಗಂಟೆಗೆ ತನುಷ್ ನ ತಾಯಿ ಕವಿತಾ, ಎಂದಿನಂತೆ ತಮ್ಮ ಕೆಲಸಕ್ಕೆ ಹೊರಟಿದ್ದರು. ಹೊರಡುವ ಮುನ್ನ ಒಳ್ಳೆಯ ರೀತಿಯಲ್ಲಿ ಓದು ಎಂದು ಬುದ್ದಿ ಮಾತನ್ನು ಹೇಳಿದ್ದರು. ತನುಷ್‌‌ ಹಠಮಾರಿತನದಿಂದ ಹಾಗೂ ವಿದ್ಯೆ ಸರಿಯಾಗಿ ತಲೆಗೆ ಹೋಗದ ಕಾರಣ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತನ ತಾಯಿ ಭಾವಿಸಿದ್ದಾರೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾ ಸಿಬ್ಬಂದಿಗಳು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!