- Advertisement -


- Advertisement -
ಮಂಗಳೂರು: ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಬಡ ಕುಟುಂಬಗಳಿಗೆ ನಿಸ್ವಾರ್ಥ ಹಾಗೂ ಜನಸ್ನೇಹಿ ವೈದ್ಯಕೀಯ ಸೇವೆ ನೀಡುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಪದವಿನಂಗಡಿಯ ಖ್ಯಾತ ವೈದ್ಯ ಡಾ.ಭರತ್ ಕುಮಾರ್ ಎಂ ಅವರು ಸೋಮವಾರ (ಜು.06) ಮುಂಜಾನೆ ನಿಧನರಾಗಿದ್ದಾರೆ.
ಪದವಿನಂಗಡಿಯಲ್ಲಿ ತಮ್ಮ ಕ್ಲಿನಿಕ್ ಹೊಂದಿದ್ದ ಇವರು ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತವಾಗಿ ಔಷಧ ಮತ್ತು ಚಿಕಿತ್ಸೆ ನೀಡುವ ಮೂಲಕ ದೀನಬಂಧುವಾಗಿದ್ದರು. ಕೇವಲ ಪದವಿನಂಗಡಿಯಷ್ಟೇ ಅಲ್ಲದೆ, ಕೊಂಚಾಡಿ, ಪಚ್ಚನಾಡಿ, ಬೊಂದೇಲ್, ಕಾವೂರು ಹಾಗೂ ದೇರೆಬೈಲ್ ಸೇರಿದಂತೆ ಮಂಗಳೂರಿನ ಹಲವು ಭಾಗಗಳ ಜನರಿಗೆ ಸುದೀರ್ಘ ಕಾಲ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಿದ್ದ ಡಾ. ಭರತ್ ಅವರು, ತಮ್ಮ ನಿಸ್ವಾರ್ಥ ಸೇವಾ ಮನೋಭಾವದಿಂದ ಇಡೀ ಸಮಾಜದಲ್ಲಿ ‘ಜನಸ್ನೇಹಿ ವೈದ್ಯ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅವರ ನಿಧನದಿಂದಾಗಿ ಮಂಗಳೂರಿನ ಬಡ ಜನರ ಪಾಲಿನ ಆಶಾಕಿರಣವಾಗಿದ್ದ ಒಬ್ಬ ಅಪರೂಪದ ಮಾನವೀಯ ವೈದ್ಯರನ್ನು ಕಳೆದುಕೊಂಡಂತಾಗಿದೆ.
- Advertisement -


