- Advertisement -


- Advertisement -
ಪುತ್ತೂರು: ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಮಂಡಲದ ಮಾಸಿಕ ಸಭೆಯು ಯಶಸ್ವಿಯಾಗಿ ಜರುಗಿತು.
ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ, ಪರಿಸರ ಜಾಗೃತಿಯ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನ ಹಾಗೂ ಪಕ್ಷದ ಎಸ್‌ಐಆರ್ (SIR) ಚಟುವಟಿಕೆಗಳ ಕುರಿತು ಪ್ರಮುಖವಾಗಿ ಚರ್ಚಿಸಿ, ಅವಲೋಕನ ನಡೆಸಲಾಯಿತು.
ಇದೇ ಸಂದರ್ಭದಲ್ಲಿ, ತೆರವಾಗಿದ್ದ ಗ್ರಾಮಾಂತರ ಮಂಡಲದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಗೆ ನಿತೀನ್ ಬೊಡ್ಡೋಣಿ ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು.
ಈ ಹಿಂದೆ ಯುವಮೋರ್ಚಾದ ಉಪಾಧ್ಯಕ್ಷರಾಗಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಸಂಘಟನೆಯನ್ನು ಬಲಪಡಿಸಿದ್ದ ನಿತೀನ್ ಅವರ ಸಾಮಾಜಿಕ ಸಕ್ರಿಯತೆಯನ್ನು ಗುರುತಿಸಿ, ಯುವಮೋರ್ಚಾ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಿಶಿರ್ ಪೆರ್ವೋಡಿ ಅವರು ಈ ನೂತನ ನೇಮಕಾತಿಯನ್ನು ಪ್ರಕಟಿಸಿದರು.
- Advertisement -


