Wednesday, June 3, 2026
Homeತಾಜಾ ಸುದ್ದಿಇಡಿ ವಿಚಾರಣೆ ವೇಳೆ ಬಯಲಾಯ್ತು ಸಂಜನಾ ಬಡ್ಡಿ ವ್ಯವಹಾರದ ಕಹಾನಿ, ಸಾಲ ವಾಪಾಸ್ ಮಾಡದಿದ್ದರೆ ಏನ್...

ಇಡಿ ವಿಚಾರಣೆ ವೇಳೆ ಬಯಲಾಯ್ತು ಸಂಜನಾ ಬಡ್ಡಿ ವ್ಯವಹಾರದ ಕಹಾನಿ, ಸಾಲ ವಾಪಾಸ್ ಮಾಡದಿದ್ದರೆ ಏನ್ ಮಾಡುತ್ತಿದ್ದಳು ಗೊತ್ತಾ?

- Advertisement -
- Advertisement -

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ವಿಚಾರಣೆ ವೇಳೆ ಒಂದೊಂದೇ ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ಇದೀಗ ಆಕೆ  ಬಡ್ಡಿ ವ್ಯವಹಾರ ನಡೆಸುತ್ತಿದ್ದಳು ಅನ್ನೋದು ವಿಚಾರಣೆ ವೇಳೆ ಗೊತ್ತಾಗಿದೆ.

ಸಂಜನಾ ಗಲ್ರಾನಿ ನಟನೆ ಜೊತೆಗೆ ಕೋಟಿ ಕೋಟಿ ರೂಪಾಯಿ ಬಡ್ಡಿ ವ್ಯವಹಾರ ಸಹ ಡೆಸುತ್ತಿದ್ದಳಂತೆ.ಸಂಜನಾ ನಗರದ ಪ್ರತಿಷ್ಠಿತ ಉದ್ಯಮಿಗಳಿಗೆ ಮತ್ತು ಪ್ರತಿಷ್ಠಿತ ಮಾಲ್ ಮಾಲೀಕರಿಗೆ ಸಾಲ ನೀಡುತ್ತಿದ್ದ ಮಾಹಿತಿ ಲಭ್ಯವಾಗಿದ್ದು 20ಕ್ಕೂ ಹೆಚ್ಚು ಜನರಿಗೆ ಸಂಜನಾ ಸಾಲ ನೀಡಿದ್ದಾಳೆ ಎಂದು ತಿಳಿದುಬಂದಿದೆ. ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಹಲವು ಚೆಕ್‌ಗಳು ಪತ್ತೆಯಾಗಿತ್ತಂತೆ. ಇದನ್ನು ಆಧರಿಸಿ ED ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆ ಮಾಹಿತಿ ಸಿಕ್ಕಿದೆ.

ಉದ್ಯಮಿಗಳಿಗೆ ಸಾಲ ನೀಡಿ ಬಡ್ಡಿ ವಸೂಲಿ ಮಾಡ್ತಿದ್ದ ಸಂಜನಾ ಸಾಲ ವಸೂಲಾತಿಗೆ ನಾಲ್ವರನ್ನ ಕೆಲಸಕ್ಕೆ ಸಹ ಇಟ್ಟುಕೊಂಡಿದ್ದಳಂತೆ. ಇದಲ್ಲದೆ, ಉದ್ಯಮಿಗಳು ಹಾಗೂ ಶಾಪಿಂಗ್ ಮಾಲ್​ ಮಾಲೀಕರು ಒಂದು ವೇಳೆ ಸಾಲ ಅಥವಾ ಬಡ್ಡಿ ಮರುಪಾವತಿಸದಿದ್ದರೇ ಅವರ ಲಕ್ಷಾಂತರ ರೂಪಾಯಿ ಮೌಲ್ಯದ ಐಷಾರಾಮಿ ಕಾರ್​ಗಳನ್ನ ಎತ್ತಾಕಿಕೊಂಡು ಹೋಗ್ತಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!