Tuesday, July 7, 2026
Homeಚಿಕ್ಕಮಗಳೂರುಕಾಡುಕೋಣ ದಾಳಿಗೆ ಮಹಿಳೆ ಬಲಿ

ಕಾಡುಕೋಣ ದಾಳಿಗೆ ಮಹಿಳೆ ಬಲಿ

- Advertisement -
- Advertisement -

ಚಿಕ್ಕಮಗಳೂರು: ತಾಲೂಕಿನ ಬಿಳಗುಳಿ ಗ್ರಾಮದ ಬಳಿ ಜುಲೈ 7ರ ಮಂಗಳವಾರದಂದು ಕಾಡುಕೋಣವೊಂದು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಬಿಳಗುಳಿ ನಿವಾಸಿ ಶೀಲಾ (52) ಮೃತಪಟ್ಟ ದುರ್ದೈವಿ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಶೀಲಾ ಅವರ ಮೇಲೆ ಕಾಡುಕೋಣ ಏಕಾಏಕಿ ತೀವ್ರವಾಗಿ ದಾಳಿ ಮಾಡಿದೆ. ಈ ವೇಳೆ ಕೋಣ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾಗಿ ತಿವಿದಿದ್ದರಿಂದ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!