Thursday, June 4, 2026
Homeತಾಜಾ ಸುದ್ದಿಅಪಹರಣವಾಗಿದ್ದ 3 ವರ್ಷದ ಬಾಲಕಿ 25 ದಿನಗಳ ಬಳಿಕ ಪತ್ತೆ...

ಅಪಹರಣವಾಗಿದ್ದ 3 ವರ್ಷದ ಬಾಲಕಿ 25 ದಿನಗಳ ಬಳಿಕ ಪತ್ತೆ…

- Advertisement -
- Advertisement -

ಬೆಂಗಳೂರು : ಅಪರಾಧಿಗಳು ಚಾಪೆ ಕೆಳಗೆ ತೂರಿದ್ರೆ, ಪೊಲೀಸರು ರಂಗೋಲಿ ಕೆಳಗೆ ತೂರ್ತಾರೆ. ಇದೀಗ ಇದೇ ರೀತಿ 3 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದ ಖದೀಮನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

 25 ದಿನಗಳ ಹಿಂದೆ 3 ವರ್ಷದ ಬಾಲಕಿ ಲೋಕಿತಾಗೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಐಸ್‌ಕ್ರೀಂ ಕೊಡಿಸುವುದಾಗಿ ಆಸೆ ತೋರಿಸಿ ಅಪಹರಿಸಿದ್ದ. ಇದೀಗ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕಾಲುಯಾಕ್ಕವಿಲೈ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಅಲ್ಲಿಗೆ ತೆರಳಿದ್ದು, ಬಾಲಕಿಯನ್ನು ಇಂದು ಕರೆ ತರುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಜೋಸೆಫ್ ಜಾನ್ ಎಂಬುವನನ್ನು ಬಂಧಿಸಿದ್ದಾರೆ. ಆದರೆ ಅಪಹರಣಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ, ತನಿಖೆ ಬಳಿಕ ಸತ್ಯ ಹೊರಬೀಳಲಿದೆ.

- Advertisement -

Latest News

error: Content is protected !!