Wednesday, June 3, 2026
Homeತಾಜಾ ಸುದ್ದಿಡ್ರಗ್ಸ್ ಪೆಡ್ಲರ್ ಕಿಶೋರ್ ಶೆಟ್ಟಿ ಬೆಂಬಲಕ್ಕೆ ನಿಂತಿದ್ದಾರಾ ಮಂಗಳೂರಿನ ಪ್ರಭಾವಿ ವ್ಯಕ್ತಿ?

ಡ್ರಗ್ಸ್ ಪೆಡ್ಲರ್ ಕಿಶೋರ್ ಶೆಟ್ಟಿ ಬೆಂಬಲಕ್ಕೆ ನಿಂತಿದ್ದಾರಾ ಮಂಗಳೂರಿನ ಪ್ರಭಾವಿ ವ್ಯಕ್ತಿ?

- Advertisement -
- Advertisement -

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಡ್ಯಾನ್ಸರ್, ಡ್ರಗ್ಸ್ ಪೆಡ್ಲರ್ ಕಿಶೋರ್ ಶೆಟ್ಟಿ ಈಗಗಾಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನೇಕರ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ.

ಹೀಗಿರುವಾಗಲೇ, ಸಿಸಿಬಿ ವಶದಲ್ಲಿರುವ ಕಿಶೋರ್ ಶೆಟ್ಟಿಯನ್ನು ವಿಚಾರಣೆಯಿಂದ ಕೈಬಿಡುವಂತೆ ಕರಾವಳಿಯ ಶಾಸಕರೊಬ್ಬರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಕಿಶೋರ್ ಶೆಟ್ಟಿಗೆ ಈ ಕೇಸ್ ನಿಂದ ಕ್ಲೀನ್ ಚಿಟ್ ನೀಡುವಂತೆ ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಶಾಸಕರಿಗೆ ಒತ್ತಡ ಹೇರಿದ್ದಾರೆ, ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಅಲ್ಲದೇ, ಶಾಸಕರು ಸಿಸಿಬಿ ಪೊಲೀಸರಿಗೆ ಕಿಶೋರ್ ಶೆಟ್ಟಿಯನ್ನು ವಿಚಾರಣೆಗೊಳಪಡಿಸದಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಆದರೆ ಸಿಸಿಬಿ ಪೊಲೀಸರು ಶಾಸಕರ ಒತ್ತಡಕ್ಕೆ ಮಣಿಯದೇ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!