Tuesday, April 30, 2024
Homeಕರಾವಳಿಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್‌ ಶೆಟ್ಟಿ!; ಕೆ.ಎಲ್ ರಾಹುಲ್​ ತಂದೆ ಆಗಲಿದ್ದಾರೆ?

ಅಥಿಯಾ ಶೆಟ್ಟಿ ಪ್ರೆಗ್ನೆನ್ಸಿ ಬಗ್ಗೆ ಸುಳಿವು ಕೊಟ್ಟ ಸುನೀಲ್‌ ಶೆಟ್ಟಿ!; ಕೆ.ಎಲ್ ರಾಹುಲ್​ ತಂದೆ ಆಗಲಿದ್ದಾರೆ?

spot_img
- Advertisement -
- Advertisement -

ಮುಂಬೈ: ಟೀಂ ಇಂಡಿಯಾ ಆಟಗಾರ ಕೆ.ಎಲ್​. ರಾಹುಲ್ ಮತ್ತು ಅವರ ಪತ್ನಿ ನಟಿ ಆಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಸುನೀಲ್‌ ಶೆಟ್ಟಿ ಅವರು ತಮ್ಮ ಮಗಳು ಅಥಿಯಾ ಪ್ರೆಗ್ನೆನ್ಸಿ ಬಗ್ಗೆ ಸುಳಿವು ನೀಡಿದ್ದಾರೆ.

ರಾಹುಲ್ ಅವರನ್ನು ವಿವಾಹವಾದ ಅಥಿಯಾ ಶೆಟ್ಟಿ, ಮದುವೆಯಾದ ಒಂದು ವರ್ಷದ ನಂತರ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿಯನ್ನು ಕೇಳಿದ ರಾಹುಲ್​ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಜೂನಿಯರ್ ರಾಹುಲ್​ ಆರ್​ಸಿಬಿಗೆ ಆಡಲಿ ಎಂದು ಹಾರೈಸುತ್ತಿದ್ದಾರೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಈಗ ಮಾಧುರಿ ದೀಕ್ಷಿತ್ ಜತೆಗೆ ಡ್ಯಾನ್ಸ್ ರಿಯಾಲಿಟಿ ಶೋ ʻಡ್ಯಾನ್ಸ್ ದೀವಾನೆ ವಿಶೇಷ ಸಂಚಿಕೆಯಲ್ಲಿ, ನಿರೂಪಕಿ ಭಾರ್ತಿ ಸಿಂಗ್ ಸುನೀಲ್​ ಶೆಟ್ಟಿ ಅವರು ಅಜ್ಜನ ರೀತಿ ಹೇಗೆ ವರ್ತಿಸಬಹುದು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟಿ “ಹೌದು ಮುಂದಿನ ಸೀಸನ್‌ಗೆ ಬಂದಾಗ ನಾನು ವೇದಿಕೆಯ ಮೇಲೆ ಅಜ್ಜನಂತೆಯೇ ಓಡಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಟನ ಈ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.

ರಾಹುಲ್ ಮತ್ತು ಅಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಅಭಿಮಾನಿಗಳು ಪ್ರಶ್ನೆ ಇಟ್ಟಿದ್ದಾರೆ. ಅಥಿಯಾ ಶೆಟ್ಟಿ ಮದುವೆ ನಂತರ ಸಿನಿಮಾಗಳಿಂದ ದೂರವಿದ್ದಾರೆ. ಇತ್ತೀಚೆಗೆ ಯಾವುದೇ ಬಾಲಿವುಡ್‌ಗೆ ಸಂಬಂಧಿಸಿದ ಪಾರ್ಟಿಗಳಲ್ಲಿ ಅಥಿಯಾ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಈ ಸುದ್ದಿ ಸತ್ಯ ಇರಬಹುದು ಎಂದು ಅವರ ಫ್ಯಾನ್ಸ್‌ ಊಹಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!