Tuesday, April 30, 2024
Homeಕರಾವಳಿಉಡುಪಿಉಡುಪಿ: ವಿಶಾಲಾ ಗಾಣಿಗ ಕೊಲೆ ಪ್ರಕರಣವನ್ನು ಭೇದಿಸಿದ ಅಧಿಕಾರಿಗಳ ತಂಡಕ್ಕೆ ನಗದು ಪುರಸ್ಕಾರ...!

ಉಡುಪಿ: ವಿಶಾಲಾ ಗಾಣಿಗ ಕೊಲೆ ಪ್ರಕರಣವನ್ನು ಭೇದಿಸಿದ ಅಧಿಕಾರಿಗಳ ತಂಡಕ್ಕೆ ನಗದು ಪುರಸ್ಕಾರ…!

spot_img
- Advertisement -
- Advertisement -

ಉಡುಪಿ: ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದ ವಿಶಾಲಾ ಗಾಣಿಗ ಕೊಲೆ ಪ್ರಕರಣವನ್ನು ಭೇದಿಸಿದ ಅಧಿಕಾರಿಗಳ ತಂಡಕ್ಕೆ ಗುರುವಾರ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ₹ 50,000 ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಜುಲೈ 12ರಂದು ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿಯಲ್ಲಿ ವಿಶಾಲಾ ಗಾಣಿಗ ಅವರನ್ನು ಸುಪಾರಿ ಕಿಲ್ಲರ್‌ಗಳು ಕೊಲೆ ಮಾಡಿದ್ದರು. ಅತ್ಯಂತ ಕ್ಷಿಷ್ಟಕರವಾದ ಪ್ರಕರಣವನ್ನು ಭೇದಿಸಲು ಎಸ್‌ಪಿ ವಿಷ್ಣುವರ್ದನ್ ಐದು ತನಿಖಾ ತಂಡಗಳನ್ನು ರಚಿಸಿದ್ದರು. ತನಿಖೆಯ ಜಾಡು ಹಿಡಿದ ಪೊಲೀಸರು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸ್ವಾಮಿನಾಥನ್ ನಿಶಾದ್ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.

ವಿಚಾರಣೆ ವೇಳೆ ಪತಿ ರಾಮಕೃಷ್ಣ ಗಾಣಿಗನೇ ವಿಶಾಲಾ ಗಾಣಿಗರನ್ನು ಕೊಲೆ ಮಾಡಿಸಿದ ಸತ್ಯ ಬಹಿರಂಗವಾಗಿತ್ತು. ಪ್ರಕರಣವನ್ನು ಭೇದಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ತಂಡಕ್ಕೆ ರಾಜ್ಯ ಡಿಜಿ, ಐಜಿಪಿ ಪ್ರವೀಣ್ ಸೂದ್ ₹ 50000 ನಗದು ಪುರಸ್ಕಾಾರ ಘೋಷಿಸಿದ್ದರು.

ಹೆಚ್ಚುವರಿ ಎಸ್‌ಪಿ ಕುಮಾರ ಚಂದ್ರ, ಡಿವೈಎಸ್‌ಪಿ ಸುಧಾಕರ ನಾಯಕ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಮಣಿಪಾಲ ಇನ್‌ಸ್ಪೆಕ್ಟರ್ ಮಂಜುನಾಥ ಗೌಡ, ಮಲ್ಪೆ ಇನ್‌ಸ್ಪೆಕ್ಟರ್ ಶರಣ್ ಗೌಡ, ಕಾರ್ಕಳ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್, ಪಿಎಸ್‌ಐಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿಡಿಆರ್ ವಿಭಾಗದ ಶಿವಾನಂದ, ದಿನೇಶ್, ನಿತಿನ್ ಅವರನ್ನು ಅಭಿನಂದಿಸಲಾಯಿತು.

- Advertisement -
spot_img

Latest News

error: Content is protected !!