Friday, June 5, 2026
Homeಕರಾವಳಿಬೆನಕ ಹೆಲ್ತ್ ಸೆಂಟರ್ ನ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗ ಹಾಗೂ ಸಿ.ಟಿ ಸ್ಕ್ಯಾನಿಂಗ್ ವಿಭಾಗವನ್ನು ಉದ್ಘಾಟಿಸಿದ...

ಬೆನಕ ಹೆಲ್ತ್ ಸೆಂಟರ್ ನ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗ ಹಾಗೂ ಸಿ.ಟಿ ಸ್ಕ್ಯಾನಿಂಗ್ ವಿಭಾಗವನ್ನು ಉದ್ಘಾಟಿಸಿದ ಪೇಜಾವರ ಶ್ರೀ

- Advertisement -
- Advertisement -

ಉಜಿರೆ: ಇಲ್ಲಿನ ಬೆನಕ ಹೆಲ್ತ್ ಸೆಂಟರ್ ನಲ್ಲಿ ಉನ್ನತೀಕರಿಸಿದ ರೇಡಿಯೋಲಜಿ ವಿಭಾಗದ ಮತ್ತು ನೂತನ ಸಿ.ಟಿ.ಸ್ಕ್ಯಾನಿಂಗ್ ಪ್ರಾರಂಭೋತ್ಸವವು ಎ.30 ಮಂಗಳವಾರದಂದು ನಡೆಯಿತು.

ರೇಡಿಯೋಲಜಿ ಹಾಗೂ ಸಿ.ಟಿ ಸ್ಕ್ಯಾನಿಂಗ್ ವಿಭಾಗವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರಿನ ಬಲ್ಮಟ ಸಿಟಿ ಸ್ಕ್ಯಾನಿಂಗ್ ಸಂಸ್ಥೆಯ ಡಾ.ಅತಿಂದ್ರ ಮಂಗಳೂರು, ಡಾ.ಗೋಪಾಲಕೃಷ್ಣರವರ ತಂದೆ ಸೀತಾರಾಮ ಭಟ್, ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಗೋಪಾಲಕೃಷ್ಣ ಪ್ರಸ್ತಾವನೆಗೈದರು, ಡಾ.ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೈದ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಿ.ಆರ್.ಒ ಎಸ್.ಜಿ ಭಟ್ ಸ್ವಾಗತಿಸಿದರು.

- Advertisement -

Latest News

error: Content is protected !!