Thursday, May 16, 2024
Homeಕರಾವಳಿಬೆಳ್ತಂಗಡಿ : ಲಾಯಿಲ ಸ.ಹಿ.ಪ್ರಾ ಶಾಲಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ         

ಬೆಳ್ತಂಗಡಿ : ಲಾಯಿಲ ಸ.ಹಿ.ಪ್ರಾ ಶಾಲಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ         

spot_img
- Advertisement -
- Advertisement -

ಬೆಳ್ತಂಗಡಿ: ಪ್ರತಿಯೊಬ್ಬರ ಬದುಕಿನ ಅವಿಸ್ಮರಣೀಯ ದಿನಗಳು ಪ್ರಾಥಮಿಕ ಶಾಲೆ ಮತ್ತು ಅಲ್ಲಿನ ಶಿಕ್ಷಣ.ಶಿಕ್ಷಣದಲ್ಲಿ ತಾಯಿ ಪ್ರೀತಿಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರ ಸಿಗಲುಸಾಧ್ಯ. ಊರಿನ ಶಿಕ್ಷಣ ಸಂಸ್ಥೆಗಳ ಅಭಿವೃದ್ದಿಗೆ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಕೊಡುಗೆ ಅಗತ್ಯವಾಗಿದ್ದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು ಇದೊಂದು ಪುಣ್ಯದ ಕಾರ್ಯ ಎಂದು  ಹಿರಿಯ ನ್ಯಾಯವಾದಿ ಬಿ ಕೆ ಧನಂಜಯ ರಾವ್ ಹೇಳಿದರು. ಅವರು ಭಾನುವಾರ ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆ ಬೆಂಗಳೂರು, ರೋಟರಿ ಕ್ಲಬ್ ರಿ ಬೆಳ್ತಂಗಡಿ, ಬದುಕು ಕಟ್ಟೋಣ ಸೇವಾ ಟ್ರಸ್ಟ್ ರಿ ಉಜಿರೆ,ಹಳೆ ವಿದ್ಯಾರ್ಥಿ ಸಂಘ ದ.ಕ ಜಿ ಪ ಹಿ ಪ್ರಾ ಶಾಲೆ ಕರ್ನೋಡಿ, ಪತ್ರಕರ್ತರ ಸಂಘ ರಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬದುಕು ಕಟ್ಟೋಣ ತಂಡದ ಸೇವಾ ಸಂಕಲ್ಪ ಅಕ್ಷರ ದೇಗುಲಕ್ಕೆ ಅಕ್ಕರೆಯ ಸೇವೆ ಎಂಬಂತೆ ದ.ಕ ಜಿ .ಪಂ.ಹಿ ಪ್ರಾ ಶಾಲೆ ಕರ್ನೋಡಿ ಲಾಯಿಲ ಇದರ ಜೀರ್ಣೋದ್ಧಾರ ಕಾಮಗಾರಿಗೆ ಏ.28 ರಂದು ಚಾಲನೆ ನೀಡಿ ಮಾತನಾಡಿ ರೋಟರಿ ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ತಾಲೂಕಿನಲ್ಲಿ 2.5 ಕೋಟಿ ವೆಚ್ಚದಲ್ಲಿ ವಿವಿಧ ರೀತಿಯ ಸೇವಾ ಕಾರ್ಯ ಮಾಡಿದೆ. ಬೆಂಗಳೂರು ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆ 1.5 ಕೋಟಿ ನೆರವನ್ನು ತಾಲೂಕಿಗೆ ನೀಡಿದೆ. ಬದುಕು ಕಟ್ಟೋಣ ತಂಡದ ಹಲವಾರು ಸೇವೆಗಳಲ್ಲಿ ಶಿಕ್ಷಣ ಸೇವೆ ದೇವರು ಮೆಚ್ಚುವ ಸೇವೆಯಾಗಿದೆ.ಇವರು ನಮ್ಮ ಶಾಲೆಯ ಅಭಿವೃದ್ಧಿಗೆ ಮುಂದೆ ಬಂದಿದ್ದು ನಮ್ಮೂರಿನ ಭಾಗ್ಯ ಇವರ ಸೇವೆಗೆ ಹಳೆವಿದ್ಯಾರ್ಥಿಗಳು ,ಗ್ರಾಮಸ್ಥರು ಶಕ್ತಿಮೀರಿ ಕೈಜೋಡಿಸಬೇಕು ಎಂದರು.                                         

 ಬೆಳ್ತಂಗಡಿ ರೋಟರಿ ಕ್ಲಬ್ ನ ಅದ್ಯಕ್ಷ ಅನಂತ್ ಭಟ್ ಮಚ್ಚಿಮಲೆ ಮಾತನಾಡಿ ಶಾಲೆಗಳ ಅಬಿವ್ರುದ್ದಿಗೆ ದಾನಿಗಳು  ,ಸಂಘ ಸಂಸ್ಥೆಗಳು ಮುಂದೆ ಬರಬೇಕಾದರೆ ಹಳೆವಿದ್ಯಾರ್ಥಿಗಳು ,ಊರವರು  ಆಸಕ್ತಿ ವಹಿಸಬೇಕು.ಲಾಯಿಲದಲ್ಲಿ ಹಳೆವಿದ್ಯಾರ್ಥಿಗಳ, ಊರಿನವರ ಭಾಗವಹಿಸುವಿಕೆ ನೋಡಿದರೆ ರಾಜ್ಯದಲ್ಲೇ ಮಾದರಿಯಾಗಿ ಅಬಿವ್ರುದ್ದಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು. ಬದುಕುಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.   

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ನಿಯೋಜಿತ ಅದ್ಯಕ್ಷ ಪೂರಣ್ ವರ್ಮ, ಹಳೆವಿದ್ಯಾರ್ಥಿ ಸಂಘದ ಸ್ಥಾಪಕ ಅದ್ಯಕ್ಷ ಸಂತೋಷ್ ಕುಮಾರ್, ಅದ್ಯಕ್ಷ ಸುರೇಶ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಚೈತ್ರೇಶ್ ಇಳಂತಿಲ,ಮಾಜಿ ಸೈನಿಕರ ಸಂಘದ ಅದ್ಯಕ್ಷ ಸುನಿಲ್ ಶೆಣೈ,ಉದ್ಯಮಿ ಅಬ್ದುಲ್ ಕರಿಂ, ಮುಖ್ಯೋಪಾಧ್ಯಾಯ ಜಗನ್ನಾಥ್ ,ಶಾಲಾಬಿವ್ರುದ್ದಿ ಸಮಿತಿ ಅದ್ಯಕ್ಷೆ ಸೌಮ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು. ಸಹಶಿಕ್ಷಕ ಕೃಷ್ಣಪ್ರಸಾದ್ ಸ್ವಾಗತಿಸಿ,  ರುಕ್ಮಯ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ವಂದಿಸಿದರು.           

ಬಾಕ್ಸ್   ಸರಕಾರಿ ಶಾಲೆ ಅಬಿವ್ರುದ್ದಿಯ ಬದುಕುಕಟ್ಟೋಣ ತಂಡದ ಚಿಂತನೆಗೆ ರೋಟರಿ ಕ್ಲಬ್ ಬೆಳ್ತಂಗಡಿ, ಪತ್ರಕರ್ತರ ಸಂಘ ಬೆಳ್ತಂಗಡಿ ಕೈ ಜೋಡಿಸುವ ಮೂಲಕ ಶಕ್ತಿ ತುಂಬಿದೆ. 25 ಸರಕಾರಿ ಶಾಲೆಯ ಅಭಿವೃದ್ಧಿ ನಮ್ಮ ಕನಸು.ನಮ್ಮ ತಂಡವು ಪ್ರತಿಯೊಂದು ಕೆಲಸವನ್ನು ಶ್ರಮದಾನದ ಮೂಲಕ ಮಾಡಲಿದ್ದು ಇದಕ್ಕೆ ಊರವರು,ಊರಿನ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು.ಈಗಾಗಲೇ ಮೂರು ಶಾಲೆಗಳನ್ನು ಅಬಿವೃದ್ಧಿ ಮಾಡಲಾಗಿದೆ.

ಉಜಿರೆ ಹಳೆಪೇಟೆ ಶಾಲೆಯು ಮಾದರಿಯಾಗಿ ದಾಖಲೆ ರೀತಿಯಲ್ಲಿ ಅಭಿವೃದ್ಧಿಯಾಗಿದ್ದು ಇದನ್ನು ಮೇ 23 ರಂದು ಶಿಕ್ಷಣ ತಜ್ನ ಡಾ ಯಶೋವರ್ಮ ರವರ ನೆನಪಿನಲ್ಲಿ ಯಶೋವನ ಕಾರ್ಯಕ್ರಮವಾಗಿ ಉದ್ಘಾಟಿಸಲಿದ್ದೇವೆ ಎಂದು ಸಂಚಾಲಕರಾದ                           ಮೋಹನ್ ಕುಮಾರ್ ತಿಳಿಸಿದರು.

- Advertisement -
spot_img

Latest News

error: Content is protected !!