Sunday, April 28, 2024
Homeಇತರದೇಶಿ ವಿಮಾನ ಹಾರಾಟ ಆರಂಭ: ಈ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

ದೇಶಿ ವಿಮಾನ ಹಾರಾಟ ಆರಂಭ: ಈ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

spot_img
- Advertisement -
- Advertisement -

ನವದೆಹಲಿ, ಮೇ 23: ಸೋಮವಾರದಿಂದ (ಮೇ 25) ದೇಶಿ ವಿಮಾನಯಾನ ಆರಂಭವಾಗಲಿದೆ. ಆದರೆ ದೇಶದ ಒಳಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕ್ವಾರಂಟೈನ್ ಇರುವುದಿಲ್ಲ, ಇದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಆರು ರಾಜ್ಯಗಳಿಗಿಲ್ಲ ಈ ಅವಕಾಶ
ಹೀಗಾಗಿ ಕರ್ನಾಟಕ ಸರ್ಕಾರ, ರಾಜ್ಯದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದಿಳಿಯುವ ಪ್ರಯಾಣಿಕರಿಗೆ, ಆರು ರಾಜ್ಯಗಳನ್ನು ಹೊರತುಪಡಿಸಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ತಗೆದಿದೆ. ಕೊರೊನಾ ಸೋಂಕಿತರು ಹೆಚ್ಚಿರುವ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ನವದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್‌ನಿಂದ ವಿಮಾನದಲ್ಲಿ ಕರ್ನಾಟಕಕ್ಕೆ ಬರುವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇಡಲು ನಿರ್ಧರಿಸಲಾಗಿದೆ.

ಏಳು ದಿನ ಸಾಂಸ್ಥಿಕ (ಇನ್ಸ್ಟಿಟ್ಯೂಷನಲ್) ಹಾಗೂ ಏಳು ದಿನ ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಎಂದು ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮೇ 25 ರಂದು ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಿದೆ. ವಿಮಾ ಪ್ರಯಾಣಕ್ಕೆ ಸಚಿವಾಲಯ ಹಲವಾರು ಷರತ್ತುಗಳನ್ನು ವಿಧಿಸಿದೆ. ವೃದ್ಧರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪ್ರಯಾಣ ಅವಕಾಶ ಇಲ್ಲ. ಮೂರನೇ ಒಂದು ಭಾಗದಷ್ಟು ವಿಮಾನಗಳು ಸಂಚರಿಸಲಿವೆ.

- Advertisement -
spot_img

Latest News

error: Content is protected !!