Saturday, June 6, 2026
Homeಕರಾವಳಿಉಡುಪಿಉಡುಪಿ: ನಗರದ ಸಂಪರ್ಕ ಝೆರಾಕ್ಸ್ ನಲ್ಲಿ ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ

ಉಡುಪಿ: ನಗರದ ಸಂಪರ್ಕ ಝೆರಾಕ್ಸ್ ನಲ್ಲಿ ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ

- Advertisement -
- Advertisement -

ಉಡುಪಿ: ನಗರದ ಪಿಪಿಸಿ ರಸ್ತೆಯಲ್ಲಿರುವ ಮೀನು ಮಾರುಕಟ್ಟೆ ಬಳಿಯ ಸಂರ್ಪಕ್ ಜೆರೆಕ್ಸ್ ಅಂಗಡಿಯಲ್ಲಿ ಸಂಜೆ ವೇಳೆ ಸಂಭವಿಸಿರುವ ಬೆಂಕಿ ಅನಾಹುತದಲ್ಲಿ ಲಕ್ಷಾಂತರ ರೂ. ನಷ್ಟವಾಗಿದೆ.

ಮಳಿಗೆಗೆ ಆಕಸ್ಮಿಕ ಬೆಂಕಿ ತಗಲಿದ್ದು ಸ್ಥಳಿಯರು ಕೂಡಲೇ ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.

ಬೆಂಕಿ ಇಡೀ ಕಟ್ಟಡದ ಆಸುಪಾಸು ಹಬ್ಬಿದೆ. ಮಳಿಗೆಯಲ್ಲಿನ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಸಾಧ್ಯತೆಯಿದ್ದು, ನಷ್ಟದ ನಿಖರ ಪ್ರಮಾಣ ತಿಳಿದು ಬಂದಿಲ್ಲ. ಅಕ್ಕ ಪಕ್ಕದ ಅಂಗಡಿಗಳ ಮಾಲೀಕರು ಸ್ಥಳಿಯರ ಸಹಾಯದಿಂದ ಅಂಗಡಿ ವಸ್ತುಗಳನ್ನು ಸ್ಥಳಾಂತರಿಸಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸರ ನೆರವಿನಿಂದ ಅಗ್ನಿ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!