Saturday, June 6, 2026
Homeಕರಾವಳಿಗುತ್ತಿಗಾರು: ಮುತ್ತಪ್ಪನಗರ- ಚಿಲ್ತಡ್ಕ ಬೈಲು ಸಂಪರ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಚಾಲನೆ

ಗುತ್ತಿಗಾರು: ಮುತ್ತಪ್ಪನಗರ- ಚಿಲ್ತಡ್ಕ ಬೈಲು ಸಂಪರ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಚಾಲನೆ

- Advertisement -
- Advertisement -

ಗುತ್ತಿಗಾರು: ಸುಳ್ಯ ಶಾಸಕರ ಶಿಫಾರಸಿನ ಮೇರೆಗೆ ಮಳೆಹಾನಿ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ 35 ಲಕ್ಷ ಅನುದಾನದಲ್ಲಿ ಗುತ್ತಿಗಾರು ಮುತ್ತಪ್ಪನಗರದಿಂದ ಚಿಲ್ತಡ್ಕ ಉಳ್ಳಾಕುಲು ಮಾಡ – ಚಿಲ್ತಡ್ಕ ಬೈಲು, ಗುಡ್ಡೆಮನೆ ಹಾಗೂ ಪೂಜಾರಿಕೋಡಿ ಬೈಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರೀಟೀಕರಣಕ್ಕೆ ಸುಳ್ಯ ತಾಲೂಕು ಪಂಚಾಯತಿಯ ಮಾಜಿ ಅಧ್ಯಕ್ಷ ರು ಹಾಗೂ ಪ್ರಸ್ತುತ ದ.ಕ. ಜಿಲ್ಲೆಯ ಬಿ.ಜೆ.ಪಿ ಕಾರ್ಯದರ್ಶಿ ಮುಳಿಯ ಕೇಶವ್ ಭಟ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗುತ್ತಿಗಾರು ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು, ನಾಲ್ಕೂರು ವಾರ್ಡ್ ಜನಪ್ರತಿನಿಧಿ ರಾಕೇಶ್ ಮೆಟ್ಟಿನಡ್ಕ, ಮಾಜಿ ಎ.ಪಿ.ಎಮ್.ಸಿ. ಅಧ್ಯಕ್ಷ ಪರಶುರಾಮ ಚಿಲ್ತಡ್ಕ, ಜತ್ತಪ್ಪ ಮಾಸ್ತರ್ ಚಿಲ್ತಡ್ಕ, ಮೋಹನ್ ಕಮಿಲ ಚಿಲ್ತಡ್ಕ, ಶಿವರಾಮ ಚಿಲ್ತಡ್ಕ, ಜಯರಾಮ ಹಾಡಿಕಲ್ಲು ಚಿಲ್ತಡ್ಕ, ಕೇಶವ ಚಿಲ್ತಡ್ಕ, ರೋಹಿತಾಕ್ಷ ಚಿಲ್ತಡ್ಕ, ಕೃಷ್ಣ ಬಾಲೆಂಬಿ ಚಿಲ್ತಡ್ಕ, ಕೀರ್ತಿ ಬಾಲೆಂಬಿ ಚಿಲ್ತಡ್ಕ, ಹರ್ಷಿತ್ ದೋಳನ ಮನೆ ಚಿಲ್ತಡ್ಕ, ಪರಶುರಾಮ ಪೂಜಾರಿಕೋಡಿ, ರಾಧಕೃಷ್ಣ ಪೂಜಾರಿಕೋಡಿ ಗುತ್ತಿಗೆದಾರ ಉಮೇಶ್ ಹುಲಿ, ದಿಲೀಪ್, ಕಾರುಣ್ಯ. ಹೆಚ್. ಚಿಲ್ತಡ್ಕ ಮುಂತಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!